
ಕಳಸ ಲೈವ್ ವರದಿ
ಇಲ್ಲಿನ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಶುಕ್ರವಾರ ಮಾವಿನ ಹಣ್ಣಿನ ಹಬ್ಬವನ್ನು ಆಚರಿಸಲಾಯಿತು.
ಈ ಹಬ್ಬಕ್ಕೆ ಪ್ರಮುಖ ದಾನಿಗಳಾದ ಶ್ರೀಮತಿ ರೀನಾ ಮೆಹ್ತಾ ಅವರು ಪ್ರಾಯೋಜಕತ್ವ ವಹಿಸಿದ್ದರು. ತಮ್ಮ ತಾಯಿಯವರಾದ ಧರ್ತಿ ಮೆಹ್ತಾ ಅವರ ಸವಿ ನೆನಪಿನಲ್ಲಿ ಹಾಗೂ ತಮ್ಮ ಮಕ್ಕಳಾದ ಅಮನ್ ಚಿಂತನ್ ಮೆಹ್ತಾ ಮತ್ತು ರೋಹನ್ ಚಿಂತನ್ ಮೆಹ್ತಾ ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಈ ಹಬ್ಬಕ್ಕಾಗಿ ಪ್ರಸಿದ್ಧ ಮಾವಿನ ನಗರಿ ಚನ್ನಗಿರಿಯಿಂದ ಪ್ರತ್ಯೇಕವಾಗಿ ಅತ್ಯಂತ ರುಚಿಕರವಾದ ಹಾಗೂ ಗುಣಮಟ್ಟದ ನೀಲಂ ತಳಿಯ ಮಾವಿನ ಹಣ್ಣುಗಳನ್ನು ತರಿಸಲಾಗಿತ್ತು.
ಶಾಲೆಯ 500ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಒಟ್ಟಾಗಿ ಕುಳಿತು ಅತ್ಯಂತ ಸಂಭ್ರಮದಿ0ದ ರುಚಿಕರವಾದ ಮಾವಿನ ಹಣ್ಣನ್ನು ಸವಿದರು.
ಕೇವಲ ಶಾಲೆಯಲ್ಲಿ ತಿನ್ನುವುದಷ್ಟೇ ಅಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಪೋಷಕರೊಂದಿಗೆ ಮನೆಯಲ್ಲಿ ಹಂಚಿಕೊ0ಡು ತಿನ್ನಲು ತಲಾ ಆರು ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ಶಾಲೆಯ ವತಿಯಿಂದ ಪ್ಯಾಕ್ ಮಾಡಿ ಕಳುಹಿಸಿಕೊಡಲಾಯಿತು.
ಮಕ್ಕಳ ಮುಖದಲ್ಲಿನ ಮುಗ್ಧ ಸಂತೋಷವೇ ನಿಜವಾದ ಹಬ್ಬ. ನಮ್ಮ ತಾಯಿಯ ನೆನಪಿನಲ್ಲಿ ಹಾಗೂ ಮಕ್ಕಳ ಹುಟ್ಟುಹಬ್ಬದ ಅಂಗವಾಗಿ ಶಾಲೆಯ ಮಕ್ಕಳಿಗೆ ಈ ಸಿಹಿ ಉಡುಗೊರೆ ನೀಡಿರುವುದು ನಮಗೆ ಅತ್ಯಂತ ತೃಪ್ತಿ ತಂದಿದೆ ಎಂದು ದಾನಿ ರೀನಾ ಮೆಹ್ತಾ ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು.
