ಕಳಸ:ಜಗಜ್ಯೋತಿ ಬಸವೇಶ್ವರರ ತತ್ವ ಆದರ್ಶ ಹಾಗೂ ಚಿಂತನೆಗಳು ಇಂದಿಗೆ ಮಾತ್ರವಲ್ಲ ಎಂದೆಂದಿಗೂ ಪ್ರಸ್ತುತ ಎಂದು ಪುಷ್ಪಗಿರಿ ಸಾಂಸ್ಕøತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಹೇಳಿದರು.
ಕಳಸದ ಪ್ರಬೋಧಿನಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಶ್ರೀ ಬಸವ ಸಮಿತಿ,ಪುಷ್ಪಗಿರಿ ಸಾಂಸ್ಕøತಿಕ ಪ್ರತಿಷ್ಠಾನ ಹಾಗೂ ಅವಿನ್ ಸ್ವರ ಸಂಗಮ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ವಿಶ್ವಕ್ಕೆ ದಿವ್ಯ ಜ್ಯೋತಿಯಾಗಿದ್ದ ಬಸವಣ್ಣನವರ ವಿಚಾರ ಧಾರೆ ಎಲ್ಲಾ ಶತಮಾನಗಳಿಗೆ ಮಾದರಿಯಾಗಿದೆ ಎಂದರು.
ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅ.ರಾ.ಸತೀಶ್ವಂದ್ರ ಮಾತನಾಡಿ ಸಮಾಜದಲ್ಲಿ ಎಲ್ಲರೂ ಸಮಾನರು ಎಲ್ಲರೂ ನಮ್ಮವರು ಎಂಬ ಬಸವಣ್ಣನವರ ಆದರ್ಶವನ್ನು ಪ್ರಾಮಾಣಿಕವಾಗಿ ಪಾಲಿಸಿದರೆ ನಾವು ಬಸವಣ್ಣನವರಿಗೆ ಸಲ್ಲಿಸುವ ದೊಡ್ಡ ಗೌರವ ಹಾಗೂ ಬಸವಣ್ಣನವರು ಕಂಡ ಸಮಾಜ ಎಂಬ ಕನಸು ನನಸಾಗುತ್ತದೆ ಎಂದರು.
ಬಸವ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ ಬಸವಣ್ಣನವರು ವ್ಯಕ್ತಿಯಾಗಿ ಬಂದಿಲ್ಲ ಸಮಾಜದ ಶಕ್ತಿಯಾಗಿ ಬಂದಿದ್ದಾರೆ.ಎಲ್ಲಾ ಸಮಾಜದ ಜನರನ್ನು ಒಂದೆಡೆ ಸೇರಿಸಿ ಕಾಯಕ ಜೀವಿಗಳನ್ನಾಗಿ ಮಾಡಿರುವ ಬಸವಣ್ಣನವರು ನನ್ನಂತೆ ಕಾಣುವ ತನ್ನಂತೆ ಭಾವಿಸುವ ವ್ಯಕ್ತಿತ್ವ ಉಳ್ಳವರಾಗಿದ್ದಾರೆ ಎಂದರು.
ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ,ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಂಚಾಲಕ ಮಗ್ಗಲಮಕ್ಕಿ ಗಣೇಶ್,ಸಂಘಟನಾ ಕಾರ್ಯದರ್ಶಿ ಬಕ್ಕಿ ಮಂಜುನಾಥ್,ಪ್ರಥಮ ಧರ್ಜೆ ಕಾಲೇಜು ಪ್ರಾಂಶುಪಾಲ ವಿನಯ್ ಕುಮಾರ್ ಶೆಟ್ಟಿ,
ರಾಜು,ಬಸವರಾಜು,ನಾಗೇಶ್,ಅನಂದ್,ಸೀಮಾ,ಕಾವ್ಯ ಇದ್ದರು.
