ಕಳಸ ಲೈವ್ ವರದಿ
ಕಂದಾಯ ಇಲಾಖೆಯ ಕಚೇರಿಯಲ್ಲಿ ಪದೇಪದೇ ಉಂಟಾಗುತ್ತಿರುವ ಸರ್ವರ್ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವುದರ ಜೊತೆಗೆ, ಭೂವಿವಾದ ಹಾಗೂ ಸರ್ವೆ ಕಾರ್ಯಗಳಲ್ಲಿ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಸ್ಥಳೀಯ ಸರ್ವೆಯರ್ಗಳನ್ನು ಬದಲಾಯಿಸಬೇಕು ಎಂದು ಕಳಸದಲ್ಲಿ ನಡೆದ ಗ್ರಾಮಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದರು.
ಕಂದಾಯ ಇಲಾಖೆ ಹಾಗೂ ಭೂಸಂಬAಧಿತ ಕೆಲಸಗಳಿಗಾಗಿ ಪ್ರತಿದಿನವೂ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಚೇರಿಗೆ ಆಗಮಿಸುತ್ತಿದ್ದಾರೆ. ಪಹಣಿ, ಆರ್ಟಿಸಿ, ಮ್ಯುಟೇಷನ್, ಭೂಮಾಪನ, ಸರ್ವೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಕಚೇರಿಗೆ ಬರುವ ಜನರಿಗೆ ಸರ್ವರ್ ಸಮಸ್ಯೆ ಪದೇಪದೇ ಎದುರಾಗುತ್ತಿದೆ. ಕಚೇರಿಗೆ ತೆರಳಿ ಗಂಟೆಗಟ್ಟಲೆ ಕಾಯುತ್ತಿದ್ದರೂ ಸರ್ವರ್ ಸಮಸ್ಯೆಯಿಂದಾಗಿ ಕೆಲಸವಾಗದೆ ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಕಳಸ ತಾಲ್ಲೂಕಿನಲ್ಲಿ ಭೂವಿವಾದಗಳಿಗೆ ಸಂಬ0ಧಿಸಿದ ಸರ್ವೆ ಕಾರ್ಯದಲ್ಲಿಯೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಗ್ರಾಮಸಭೆಯಲ್ಲಿ ಕೇಳಿಬಂತು. ಭೂಮಿಯ ಗಡಿ ಗುರುತಿಸುವುದು, ಸರ್ವೆ ನಡೆಸುವುದು ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಪಾರದರ್ಶಕತೆ ಇರಬೇಕು. ಆದರೆ ಕೆಲವು ಪ್ರಕರಣಗಳಲ್ಲಿ ಸರ್ವೆ ಕಾರ್ಯದ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿದ್ದು, ಸ್ಥಳೀಯ ಸರ್ವೆಯರ್ಗಳು ತಮ್ಮಿಷ್ಟದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸರ್ವೆ ಕಾರ್ಯದ ಬಗ್ಗೆ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸರ್ವೆಯರ್ಗಳನ್ನು ಬದಲಾಯಿಸಿ, ಬೇರೆ ಸರ್ವೆಯರ್ಗಳನ್ನು ನಿಯೋಜಿಸುವ ಮೂಲಕ ಸಾರ್ವಜನಿಕರಲ್ಲಿರುವ ಅಸಮಾಧಾನವನ್ನು ನಿವಾರಿಸಬೇಕು ಎಂದು ರಿಜ್ವಾನ್ ಹಾಗೂ ಲಕ್ಷ್ಮಣಾಚಾರ್ ಒತ್ತಾಯಿಸಿದರು.
ಕಂದಾಯ ಇಲಾಖೆಯ ಸೇವೆಗಳು ಸಾರ್ವಜನಿಕರ ದಿನನಿತ್ಯದ ಬದುಕಿಗೆ ನೇರವಾಗಿ ಸಂಬAಧಿಸಿದ್ದಾಗಿದ್ದು, ಸರ್ವರ್ ಸಮಸ್ಯೆ ಹಾಗೂ ಸರ್ವೆ ಕಾರ್ಯದಲ್ಲಿನ ವಿಳಂಬದಿ0ದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಬಾರದು. ಗ್ರಾಮಸಭೆಯಲ್ಲಿ ವ್ಯಕ್ತವಾದ ಅಹವಾಲುಗಳನ್ನು ಸಂಬAಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
