ಕಳಸ ಲೈವ್ ವರದಿ
ಕಳಸ ತಾಲೂಕಿನ ಹಳುವಳ್ಳಿಯಲ್ಲಿರುವ ಶ್ರೀ ಸುಂದರ ರಾಮ ಮಂದಿರದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ‘ಶ್ರೀಮದ್ ಭಾಗವತ ಸಪ್ತಾಹ’ ಕಾರ್ಯಕ್ರಮ ನಡೆಯುತ್ತಿದೆ.
ಸೆ ೪ ಶುಕ್ರವಾರ ಪ್ರಾರಂಭವಾದ ಸಪ್ತಾಹ, ಸೆ ೧೦ ಗುರುವಾರದವರೆಗೆ ರವರೆಗೆ ಪ್ರತಿ ದಿನ ಭಾಗವತ ಪಾರಾಯಣ ಹಾಗೂ ಕಥಾ ಶ್ರವಣ ನಡೆಯಲಿದೆ.
ಸೆ ೦೪ ಸಪ್ತಾಹ ಸಂಕಲ್ಪ, ಕಲಶ ಸ್ಥಾಪನೆ ಹಾಗೂ ಭಾಗವತ ಮಹಾತ್ಮೆ ಪಠಣ ಪ್ರಾರಂಭವಾಯಿತು.
ಶನಿವಾರ ಕಪಿಲೋಪದೇಶ ಹಾಗೂ ಜಡಭರತ ಚರಿತ್ರೆ ಶ್ರವಣ ನಡೆಯಿತು.
ಭಾನುವಾರ ನರಸಿಂಹ ಅವತಾರ ಹಾಗೂ ಭಕ್ತ ಪ್ರಹ್ಲಾದನ ಚರಿತ್ರೆ ಶ್ರವಣ.
ಸೋಮವಾರ ಗಜೇಂದ್ರ ಮೋಕ್ಷ, ವಾಮನ ಅವತಾರ ಹಾಗೂ ಶ್ರೀಕೃಷ್ಣ ಜನ್ಮೋತ್ಸವ ಕಥಾ ಶ್ರವಣ.
ಮಂಗಳವಾರ ಶ್ರೀಕೃಷ್ಣನ ಬಾಲಲೀಲೆಗಳು, ಗೋವರ್ಧನ ಪೂಜೆ ಮತ್ತು ರಾಸಲೀಲೆ ಕಥನ.
ಬುಧವಾರ ರುಕ್ಮಿಣಿ ಕಲ್ಯಾಣ ಮಹೋತ್ಸವ ಮತ್ತು ಉದ್ಧವ ಗೀತೆ.
ಗುರುವಾರ ಪರೀಕ್ಷಿತ ಮಹಾರಾಜನ ಮುಕ್ತಿ, ಭಾಗವತಕಥಾಸಾರ, ಸಪ್ತಾಹ ಮುಕ್ತಾಯ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.
ಭಾಗವತ ಶ್ರವಣದಿಂದ ಸಕಲ ಪಾಪಗಳು ನಾಶವಾಗಿ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಭಕ್ತಾದಿಗಳು ಮತ್ತು ಅವರ ಕುಟುಂಬದವರು ಈ ಪವಿತ್ರ ಸಪ್ತಾಹದಲ್ಲಿ ಪಾಲ್ಗೊಂಡು ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ “ಪುಂಡರೀಕ ಭಾಗವತರು” ವಿನಂತಿಸಿದ್ದಾರೆ.
