

ಕಳಸ ಲೈವ್ ವರದಿ
ಕಳಸ ಕೆಪಿಎಸ್ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷರಾದ ಮಹಮ್ಮದ್ ರಫೀಕ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಕೆಪಿಎಸ್ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆಯಲ್ಲಿ ಸಂಘಕ್ಕೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸರ್ವಾನುಮತದಿಂದ ಸುಧೀರ್ ಅಬ್ಬುಗುಡಿಗೆ ಅವರನ್ನು ಸಂಘದ ಸ್ಥಾಪಕ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಈ ಹಿಂದೆ ತಾತ್ಕಾಲಿಕವಾಗಿ ರಚಿತವಾಗಿದ್ದ ಸಂಘದಲ್ಲಿ ಅವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಇದೆ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ವಕೀಲ ವೆಂಕಟೇಶ್ ಜಿ.ಬಿ., ಖಜಾಂಚಿಯಾಗಿ ವಕೀಲ ಅಶೋಕ್ ಟಿ., ಕಾರ್ಯದರ್ಶಿಯಾಗಿ ಪ್ರಾಂಶುಪಾಲ ಅನಂತ ಪದ್ಮನಾಭ್, ಹಾಗೂ ಪದಾಧಿಕಾರಿಗಳಾಗಿ ಸುಮನಾ ಜಯರಾಜ್, ಉಮಾ ವಿನಯ್, ಜ್ಯೋತಿ ರಾಜೇಶ್, ಶಿವು ಕಾರಗದ್ದೆ, ಗಣೇಶ್, ನಂದನ್ ಸೇರಿದಂತೆ ಮತ್ತಿತರರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕೆಪಿಎಸ್ ಪ್ರಾಂಶುಪಾಲರಾದ ಅನಂತ ಪದ್ಮನಾಭ್, ಶಿಕ್ಷಕರಾದ ಶಿವಕುಮಾರ್, ಶೃಂಗೇಶ್ವರ್, ಸತೀಶ್ ಲೋಕೇಶ್, ಮಲ್ಲಿಕಾರ್ಜುನ್, ಎಸ್ಡಿಎಂಸಿ ಉಪಾಧ್ಯಕ್ಷರಾದ ವಸಂತ್, ಸದಸ್ಯರಾದ ವೀರೇಂದ್ರ, ರವಿಚಂದ್ರ, ಗಣೇಶ್ ಭಟ್, ಅರುಣ್ ಕುಮಾರ್ ಹಾಗೂ ಹಿರಿಯ ವಿದ್ಯಾರ್ಥಿಗಳಾದ ಉದಯ್, ಮಹೇಶ್ ಕೆ.ಸಿ, ಶಿವು ಕಾರಗದ್ದೆ, ಪ್ರಸನ್ನ, ತನ್ವೀರ್ ಮತ್ತಿತರರು ಉಪಸ್ಥಿತರಿದ್ದರು.
“ನನ್ನ ಶಾಲೆ – ನನ್ನ ಕೊಡುಗೆ” ಎಂಬ ಧ್ಯೇಯ ವಾಕ್ಯದೊಂದಿಗೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

