ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳ್ಯ ಗ್ರಾಮಕ್ಕೆ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಬೇಟಿ ನೀಡಿ ಅಲ್ಲಿಗೆ ಸೇತುವೆ ಮತ್ತು ರಸ್ತೆ ಮಾಡಿಕೊಡುವ ಭರವಸೆ ನೀಡಿದರು.

ಕಳಸ ತಾಲೂಕಿನ ಅತಿವೃಷ್ಠಿ ಪ್ರದೇಶಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳ್ಯಕ್ಕೆ ಬೇಟಿ ನೀಡಿ,ಗ್ರಾಮಕ್ಕೆ ತೆರಳಲು ಸೇತುವೆ ಇಲ್ಲದೆ ಗ್ರಾಮಸ್ಥರೆ ನಿರ್ಮಿಸಿದ ತಾತ್ಕಾಲಿಕ ತೂಗು ಸೇತುವೆ ಬಗ್ಗೆ ಪರಿಶೀಲಿಸಿ ಮಾತನಾಡಿದ ಅವರು ಗುಳ್ಯಕ್ಕೆ ಅಗತ್ಯವಾಗಿ ಸೇತುವೆ ಮತ್ತು ಅದಕ್ಕೆ ಹೊಂದಿಕೊಂಡಂತೆ ರಸ್ತೆ ನಿರ್ಮಾಣ ಆಗಬೇಕಾಗಿದೆ ಈ ಬಗ್ಗೆ ಯೋಜನಾ ವರದಿ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಆಗಸ್ಟ್ ನಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ ಗುಳ್ಯ ಗ್ರಾಮದ ಸಂಕಷ್ಟದ ಬಗ್ಗೆ ಗಮನ ಸೆಳೆದು ಸರ್ಕಾರದ ಮಟ್ಟದಲ್ಲಿ ಗುಳ್ಯದ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಳಸ ತಾಲ್ಲೂಕಿನ ಕಾರಗದ್ದೆಯಲ್ಲಿ ಮಳೆಗೆ ಸುಶೀಲ ಎಂಬುವವರ ಮನೆ ಬಿದ್ದು ಹೋಗಿತ್ತು.ಇಲ್ಲಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲ್ಲೂಕಿನಲ್ಲಿ ಆಗಿರುವ ಮನೆ ಹಾನಿಗಳ ಬಗ್ಗೆ ಸಂಪೂರ್ಣ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದ ಅವರು ಮನೆ ಹಾನಿಗೊಳಗಾದವರಿಗೆ ಪರಿಹಾರ ಕೊಡಿಸುವ ಬಗ್ಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಳಸ ತಹಶೀಲ್ದಾರ್ ನಂದ ಕುಮಾರ್,ಕಳಸ ಬಿಜೆಪಿ ಅಧ್ಯಕ್ಷ ನಾಗಭೂಷನ್, ಮೂಡಿಗೆರೆ ಮಂಡಲ ಅಧ್ಯಕ್ಷ ರಘು ಜನ್ನಾಪುರ,ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ,ಬಿಜೆಪಿ ಮುಖಂಡರಾದ ರಂಗನಾಥ್,ಕಾರ್ತಿಕ್ ಶಾಸ್ತ್ರಿ,ಬಿ.ಕೆ.ಮಹೇಶ್,ಪರಿಕ್ಷಿತ್ ಇತರರು ಇದ್ದರು.

