ಕಳಸ-ಕುದುರೆಮುಖ ಮುಖ್ಯ ರಸ್ತೆಯ ದೇವರಗುಡ್ಡ ಆಶ್ರಮದ ಬಳಿ ರಸ್ತೆ ಬಿರುಕು ಬಿಟ್ಟಿದ್ದು ಕುಸಿತಗೊಳ್ಳುವ ಭೀತಿ ಎದುರಾಗಿದೆ.

ಇಲ್ಲಿ ಈ ಹಿಂದೆ ರಸ್ತೆ ಕುಸಿಯದಂತೆ ತಡೆಗೋಡೆ ನಿರ್ಮಿಸಲಾಗಿದೆ.ಈಗ ಅದೇ ಪ್ರದೇಶ ಬಿರುಕು ಬಿಟ್ಟು ಕುಸಿಯುವ ಹಂತ ತಲುಪಿದೆ.

ರಸ್ತೆಯಿಂದ ಸುಮಾರು ಒಂದು ಅಡಿಗಳಷ್ಟು ಕುಸಿದಿದ್ದು,ವಾಹನ ಸವಾರರು ಇಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗಿದೆ.

