ಕಳಸ ಲೈವ್ ವರದಿ
ಇಲ್ಲಿನ ಸುಪ್ರಸಿದ್ಧ ಶ್ರೀ ಹೊಸದೇವರ ಚಾವಡಿಯಲ್ಲಿ ಶ್ರೀ ಮಾರಿಕಾಂಬ ಮಹಾ ಪೂಜೆ ಮತ್ತು ಗ್ರಾಮ ದೇವತೆಗಳ ನೇಮೋತ್ಸವವು ಏಪ್ರಿಲ್ 9 ರಿಂದ ಏಪ್ರಿಲ್ 28 ರವರೆಗೆ ಅತ್ಯಂತ ವಿಜೃಂಭಣೆಯಿAದ ಜರುಗಲಿದೆ.
ಏಪ್ರಿಲ್ 9 ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ಬಂಡಾರ ಮನೆಯಿಂದ ಗ್ರಾಮದೇವರ ಬಂಡಾರವು ಶ್ರೀ ಕಲಶೇಶ್ವರ ಸ್ವಾಮಿ ಸನ್ನಿಧಿಗೆ ಮತ್ತು ಅಲ್ಲಿಂದ ಹೊಸದೇವರ ಚಾವಡಿಗೆ ಸಾಗುವುದರೊಂದಿಗೆ ಚಾಲನೆ ಪಡೆಯಲಿವೆ.
ಏಪ್ರಿಲ್ 9 ರ ರಾತ್ರಿ ಮಾರಿಕಾಂಬ ಬಿಂಬ ಸ್ಥಾಪನೆ ನಡೆಯಲಿದ್ದು, ಏಪ್ರಿಲ್ 10 ರಂದು ಬೆಳಿಗ್ಗೆಯಿಂದ ಅರಮನೆ ಮಕ್ಕಿ ಮೈದಾನದಲ್ಲಿ ಮಹಾಪೂಜೆ, ಹೂವಿನ ಪೂಜೆ ಹಾಗೂ ರಾಶಿ ಪೂಜೆಗಳು ನಡೆಯಲಿವೆ.
ಏಪ್ರಿಲ್ 12ರಂದು ಶ್ರೀ ವಿಷ್ಣುಮೂರ್ತಿ, ಶ್ರೀ ರಕೇಶ್ವರಿ, ಶ್ರೀ ಅರಮನೆ ಜಟಿಗ ಹಾಗೂ ರಾಜ ದೈವದ ನೇಮ ಮತ್ತು ಉಯ್ಯಾಲೆ ಸೇವೆ.
ಏಪ್ರಿಲ್ 13ರಂದು ಶ್ರೀ ಧೂಮಾವತಿ, ಶ್ರೀ ಸೂರ್ಲುಮನೆ ಚೌಡಿ, ಶ್ರೀ ಮನಪಂಜುರ್ಲಿ ಹಾಗೂ ಜಟಿಗ ದೈವದ ನೇಮೋತ್ಸವ.
ಏಪ್ರಿಲ್ 14ರಂದು ಶ್ರೀ ಅಡಕೋಡು ಚೌಡಿ, ನಂದಿಕೋಣ, ಬೇಟೆಗಾರ ಮತ್ತು ವೀರ ಹನುಮಂತ ಪಂಜುರ್ಲಿ ದೈವಗಳ ನೇಮ.ಅಡಕೋಡು ಚೌಡಿಯ ಹೇಳಿಕೆ ಕೇಳಿಕೆ.
ಏಪ್ರಿಲ್ 21 ರಂದು ಶ್ರೀ ಗುತ್ತಿಯಮ್ಮನವರ ದೇವಸ್ಥಾನದಲ್ಲಿ ದರ್ಶನ ಬಲಿ ಮತ್ತು ಎಡೆ ಪೂಜೆ ನಡೆಯಲಿದ್ದು, ಏಪ್ರಿಲ್ 28 ರಂದು ಶ್ರೀ ಬೆಳ್ಳಾರಮ್ಮನವರಿಗೆ ತೀರ್ಥಸ್ನಾನ ಹಾಗೂ ಕೆಂಡ ದರ್ಶನದೊಂದಿಗೆ ಉತ್ಸವವು ಸಂಪನ್ನಗೊಳ್ಳಲಿದೆ.
ಊರ ಹತ್ತು ಸಮಸ್ತರು ಹಾಗೂ ಹೊಸದೇವರ ಚಾವಡಿಯ ವಹಿವಾಟುದಾರರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದಕ್ಕೆ ಪಾತ್ರರಾಗಬೇಕೆಂದು ಕೋರಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಿಂಗಾರ ಹಾಗೂ ಹೊರೆ ಕಾಣಿಕೆಯನ್ನು ಸನ್ನಿಧಿಗೆ ಸಲ್ಲಿಸುವಂತೆ ವಿನಂತಿಸಲಾಗಿದೆ
