ಕಳಸ ಲೈವ್ ವರದಿ
ಶ್ರೀ ವಿಶ್ವಾವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಪೌರ್ಣಮಿಯ ದಿನವಾದ ಮಾರ್ಚ್ 3, 2026ರ ಮಂಗಳವಾರದ0ದು ಕೇತುಗ್ರಹಣ (ಚಂದ್ರಗ್ರಹಣ) ಸಂಭವಿಸಲಿದೆ. ಸಿಂಹ ರಾಶಿಯ ಹುಬ್ಬಾ ನಕ್ಷತ್ರದಲ್ಲಿ ಸಂಭವಿಸುವ ಈ ಗ್ರಹಣವು ಖಗ್ರಾಸವಾಗಿ ಗೋಚರಿಸಲಿದ್ದು, ಈ ಹಿನ್ನೆಲೆಯಲ್ಲಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ದರ್ಶನ ಹಾಗೂ ಭೋಜನದ ಸಮಯದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ.
ಗ್ರಹಣ ಸ್ಪರ್ಶಕಾಲ: ಮಧ್ಯಾಹ್ನ 03:18 ಗಂಟೆಗೆ. ಗ್ರಹಣ ಮಧ್ಯಕಾಲ: ಸಂಜೆ 05:04 ಗಂಟೆಗೆ. ಗ್ರಹಣ ಮೋಕ್ಷಕಾಲ: ಸಂಜೆ 06:48 ಗಂಟೆಗೆ.
ಭಕ್ತಾದಿಗಳ ಗಮನಕ್ಕೆ ಪ್ರಮುಖ ಸೂಚನೆಗಳು
ಗ್ರಹಣದ ಪ್ರಯುಕ್ತ ಮಧ್ಯಾಹ್ನ 03:00 ಗಂಟೆಯಿ0ದ ಸಂಜೆ 07:00 ಗಂಟೆಯವರೆಗೆ ಭಕ್ತಾದಿಗಳಿಗೆ ಶ್ರೀಮಾತೆಯ ದರ್ಶನಕ್ಕೆ ಅವಕಾಶವಿರುವುದಿಲ್ಲ. ಈ ದಿನ ಬೆಳಿಗ್ಗೆ 09:00, ಮಧ್ಯಾಹ್ನ 12:00 ಮತ್ತು ರಾತ್ರಿ 09:00 ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ. ಗ್ರಹಣದ ಸ್ಪರ್ಶಕಾಲದಿಂದ ಮೋಕ್ಷ ಕಾಲದವರೆಗೆ ಶ್ರೀಮಾತೆಗೆ ನಿರಂತರವಾಗಿ ಅಭಿಷೇಕ ನಡೆಯಲಿದೆ.
ಮಧ್ಯಾಹ್ನದ ಪ್ರಸಾದ ಭೋಜನವು ಕೇವಲ 12:00 ಗಂಟೆಯವರೆಗೆ ಮಾತ್ರ ಲಭ್ಯವಿರುತ್ತದೆ. ಗ್ರಹಣ ಮುಕ್ತಾಯದ ನಂತರ ರಾತ್ರಿ 08:00 ಗಂಟೆಯಿ0ದ ಎಂದಿನ0ತೆ ಭೋಜನದ ವ್ಯವಸ್ಥೆ ಇರಲಿದೆ.
ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳು ಈ ಮೇಲಿನ ಬದಲಾವಣೆಗಳನ್ನು ಗಮನಿಸಿ ಸಹಕರಿಸಬೇಕೆಂದು ಕ್ಷೇತ್ರದ ಧರ್ಮಕರ್ತರು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ
