ಕಳಸ ಲೈವ್ ವರದಿ
ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಗ್ರಾಮೀಣಾಭಿವೃದ್ಧಿ ಯೋಜನೆಯಡಿ, ಏಪ್ರಿಲ್ 26, 2026ರ ಭಾನುವಾರದಂದು “ಉಚಿತ ಸಾಮೂಹಿಕ ವಿವಾಹ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಧಾರ್ಮಿಕ ಆಚರಣೆಗಳೊಂದಿಗೆ ನಡೆಯುವ ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಅರ್ಹ ವಧು-ವರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದ ಪ್ರಮುಖ ಮಾಹಿತಿ ಮತ್ತು ನಿಬಂಧನೆಗಳು ಈ ಕೆಳಗಿನಂತಿವೆ:
ಅರ್ಜಿ ಸಲ್ಲಿಕೆ ವಿವರಗಳು:
ಅರ್ಜಿ ವಿತರಣೆ: ಮಾರ್ಚ್ 1, 2026ರ ಭಾನುವಾರದಿಂದ ಶ್ರೀಕ್ಷೇತ್ರದಲ್ಲಿ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಕೊನೆಯ ದಿನಾಂಕ: ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳು ಹಾಗೂ ವಧು-ವರರ ಭಾವಚಿತ್ರದೊಂದಿಗೆ ಸಲ್ಲಿಸಲು ಏಪ್ರಿಲ್ 15, 2026ರ ಬುಧವಾರ ಕೊನೆಯ ದಿನವಾಗಿದೆ.
ಸೀಮಿತ ಅವಕಾಶ: ಸೂಕ್ತ ದಾಖಲಾತಿಗಳೊಂದಿಗೆ ಮೊದಲು ನೋಂದಾಯಿಸಿಕೊAಡ 50 ಜೋಡಿಗಳಿಗೆ ಮಾತ್ರ ವಿವಾಹವಾಗಲು ಅವಕಾಶ ಕಲ್ಪಿಸಲಾಗುವುದು.
ನಿಯಮ ಮತ್ತು ನಿಬಂಧನೆಗಳು:
ವಯಸ್ಸಿನ ದೃಢೀಕರಣ: ಸರ್ಕಾರದ ನಿಯಮದಂತೆ ನಿಗದಿಪಡಿಸಿದ ವಯಸ್ಸಿನ ಮಿತಿಯಲ್ಲಿರಬೇಕು ಮತ್ತು ಅದಕ್ಕೆ ಸಂಬAಧಿಸಿದ ವಯಸ್ಸಿನ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಅಧಿಕೃತ ದೃಢೀಕರಣ: ಸಂಬAಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳಿಂದ ಸಹಿ ಮತ್ತು ಮೊಹರು ಮಾಡಿಸಿದ ದೃಢೀಕರಣ ಪತ್ರ ಇರಬೇಕು.
ಪೋಷಕರ ಒಪ್ಪಿಗೆ: ವಧು-ವರರ ತಂದೆ-ತಾಯಿ ಅಥವಾ ಪೋಷಕರಿಂದ ವಿವಾಹಕ್ಕೆ ಒಪ್ಪಿಗೆ ಪತ್ರವನ್ನು ನೀಡಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಶ್ರೀಕ್ಷೇತ್ರ ಹೊರನಾಡಿನ ಕಛೇರಿ ದೂರವಾಣಿ ಸಂಖ್ಯೆಗಳಾದ 9448282410 ಅಥವಾ 9900076410 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕ್ಷೇತ್ರದ ಧರ್ಮಕರ್ತರು ಹಾಗೂ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
