ಕಳಸ ಲೈವ್ ವರದಿ
ಅಡಿಕೆಗೆ ತಗುಲಿರುವ ಎಲೆ ಚುಕ್ಕಿ ರೋಗದ ಹಲವು ತೊಂದರೆಗಳ ನಿವಾರಣೆಗೆ ಪರಿಹಾರವನ್ನು 29.10.22ರ ಶನಿವಾರ ಸಂಜೆ 5.00 ಗಂಟೆಗೆ ಶೃಂಗೇರಿಯ ಜಗದ್ಗುರುಗಳು ತಿಳಿಸಲಿದ್ದಾರೆ ಎಂದು ಹೊರನಾಡಿನ ಧರ್ಮಕರ್ತರಾದ ಜಿ.ಭೀಮೆಶ್ವರ ಜೋಷಿ ತಿಳಿಸಿದ್ದಾರೆ.
ಕಳಸದ ಕೃಷಿಕರ ತಂಡ 19.10.22ರಂದು ಶೃಂಗೇರಿ ಶ್ರೀಗಳನ್ನು ಬೇಟಿ ಮಾಡಿ ಪರಿಹಾರವನ್ನು ಅಪೇಕ್ಷಿಸಿ ನಿವೇದನೆಯನ್ನು ಮಾಡಿಕೊಳ್ಳಲಾಗಿತ್ತು.
ಇದಕ್ಕೆ ಪರಿಹಾರವನ್ನು 29.10.22ರ ಶನಿವಾರ ಸಂಜೆ 5.00 ಗಂಟೆಗೆ ತಿಳಿಸುವುದಾಗಿ ಜಗದ್ಗುರುಗಳು ತಿಳಿಸಿದ್ದಾರೆ.
ಆ ದಿನ ಅಪೇಕ್ಷಿತ ಎಲ್ಲಾ ಅಡಿಕೆ ಬೆಳೆಗಾರರು ಶೃಂಗೇರಿಗೆ ಬಂದು ಶ್ರಿ ಮಹಾಸ್ವಾಮಿಗಳು ತಿಳಿಸುವ ಮಾರ್ಗೋಪಾಯವನ್ನು ತಿಳಿದುಕೊಳ್ಳಲು ಅವಕಾಶವಿದೆ. ತೊಂದರೆಗೆ ಒಳಗಾದ ಅಡಿಕೆ ಬೆಳೆಗಾರರು ಈ ಸದಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಭೀಮೇಶ್ವರ ಜೋಷಿ ತಿಳಿಸಿದ್ದಾರೆ.