- ಕಳಸ ಲೈವ್ ವರದಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಸೆಯಲ್ಲಿ ವಿಜ್ಞಾನ ಅರಿವು ಕಾರ್ಯಕ್ರಮ ನಡೆಸಲಾಯಿತು…
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಳಸದ ಅಟಲ್ ಟಿಂಕರಿಂಗ್ ಲ್ಯಾಬ್ ಇವರ ವತಿಯಿಂದ ಮಕ್ಕಳಿಗೆ ವಿವಿಧ ಪ್ರಾತ್ಯಕ್ಷತೆ ನಡೆಸಲಾಯಿತು.
ಅಟಲ್ ಟಿಂಕರಿಂಗ್ ಲ್ಯಾಬ್ ನ ಉಸ್ತುವಾರಿ ಶಿಕ್ಷಕರಾದ ಸಂದೇಶ್ ವಿದ್ಯಾರ್ಥಿಗಳಿಗೆ ವಿವಿಧ ವಿಜ್ಞಾನ ಮಾದರಿಗಳ ಕಾರ್ಯಗಳನ್ನು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಕೆಂಚಪ್ಪ, ಕೆ ಪಿ ಎಸ್ ಶಾಲೆ ಕಳಸದ ಶಿಕ್ಷಕರಾದ ಶ್ರೀಯುತ ಸಂದೇಶ್ ಹಾಗೂ ಕೆ ಜೆ ವಿ ಎಸ್ ಕಳಸ ಘಟಕದ ಅಧ್ಯಕ್ಷರಾದ ಗಣೇಶ್ ಟಿ ಕುಕ್ಕೋಡು ಶಾಲೆಯ ಎಲ್ಲಾ ಶಿಕ್ಷಕರೂ ಹಾಗೂ ಮಕ್ಕಳು ಭಾಗವಹಿಸಿದ್ದರು…