
ಕಳಸ ಲೈವ್ ವರದಿ
ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಯವರು ಮನುಕುಲವನ್ನು ಸರಿದಾರಿ ಯಲ್ಲಿ ಕೊಂಡೊಯ್ಯಲು ಜೀವನ ಪಯರ್ಂತ ಶ್ರಮಿಸಿದ್ದಾರೆ ಎಂದು ಪುಷ್ಪಗಿರಿ ಸಾಂಸ್ಕøತಿಕಪ್ರತಿಷ್ಠಾನ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಹೇಳಿದರು.
ಬುಧವಾರ ಪ್ರಬೋಧಿನಿ ವಿದ್ಯಾ ಕೇಂದ್ರ ಆವರಣ ದಲ್ಲಿ ವಿವಿಧ ಸಂಘ -ಸಂಸ್ಥೆಗಳ ಸಂಯುಕ್ತ ಅಶ್ರಯ ದಲ್ಲಿ ಶಿವೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ರವರಿಗೆ ಪುಷ್ಪನಮನ ಹಾಗು ನುಡಿನಮನ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಅವರ ನಿಸ್ವಾರ್ಥ ಸೇವೆ ಹಾಗು ಅಪಾರ ಜ್ಞಾನವು ನಮಗೆಲ್ಲರಿಗೂ ಮಾದರಿ ಯಾಗಬೇಕಿದೆ. ಅತ್ಯಂತ ಸರಳ ಜೀವನವನ್ನು ಅನುಸರಿಸಿದ ಅವರ ನೆಡೆಗೂ ನುಡಿಗೂ ಅಂತರ ವಿಲ್ಲದಂತೆ ಬದುಕಿದ್ದರು ಎಂದರು.
ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷೆ ಡಾ. ರಮ್ಯಾ ಮಾತನಾಡಿ, ಕಠಿಣವಾದ ವಿಷಯ ಗಳನ್ನು ಅತ್ಯಂತ ಸರಳ ವಾಗಿ ಜನಸಾಮಾನ್ಯರಿಗೆ ಅರ್ಥ ವಾಗುವಂತೆ ಹೇಳುವ ಕೌಶಲ್ಯತೆ ಸಿದ್ದೇಶ್ವರ ಸ್ವಾಮೀಜಿ ಯವರಿಗೆ ಇತ್ತು ಅವರ ಮಧುರವಾದ ಮಾತು ಪ್ರಕಾರ ವಿಷಯ ಹಾಗು ಪ್ರಬುದ್ಧ ಚಿಂತನೆಯು ಎಂತಹವರನ್ನು ಆಕರ್ಷಿಸುತ್ತಿತ್ತು. ಅಧ್ಯಾತ್ಮದ ಜೊತೆಗೆ ವಿಜ್ಞಾನ, ಕೃಷಿ, ಶಿಕ್ಷಣ, ಪರಿಸರ ಕ್ಕೆ ಸಂಬಂದಿಸಿದ ವಿಚಾರ ಗಳಲ್ಲಿ ಅವರ ಆಸಕ್ತಿ ಹೊಂದಿದ್ದರು ಎಂದರು.
ಬಸವಸಮಿತಿ ಗೌರಾವಧ್ಯಕ್ಷ ಸತ್ಯನಾರಾಯಣ ರವರ ಮಾತನಾಡಿ ಸಮಾಜಕ್ಕೆ ಸ್ಫೂರ್ತಿ ಯಾಗುವಂತೆ ಜೀವನ ದ ಪ್ರತಿಕ್ಷಣ ವನ್ನು ಕಳೆಯುತ್ತಿದ್ದ ಸ್ವಾಮೀಜಿ ಯವರು ನಮ್ಮೊಂದಿಗೆ ಇನ್ನೂ ಹಲವು ವರ್ಷ ಗಳು ಇರಬೇಕಿತ್ತು. ಸ್ವಾಮೀಜಿ ಆಗಲಿಕೆಯು ಇಡೀ ಸಮಾಜಕ್ಕೆ ತುಂಬಾಲಾರದ ನಷ್ಟ ವಾಗಿದ್ದು ದೇಶ ಕಂಡ ಅಪರೂಪದ ಮಹಾನ್ ಸಂತ ರಾಗಿದ್ದರು ಎಂದರು.
ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕ ಶಿವಕುಮಾರ ಸ್ವಾಮಿ, ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರಸನ್ನ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಕುಕ್ಕೊಡು ಗಣೇಶ್, ಬಸವ ಸಮಿತಿ ಅಧ್ಯಕ್ಷ ಆನಂದ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಸದಸ್ಯ ರಾಜು,ಅ. ರಾ. ರಾಧಾಕೃಷ್ಣ. ಸವಿತಾ ಸಮಾಜದ ಅಧ್ಯಕ್ಷ ಮೋಹನ್. ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಅಧ್ಯಕ್ಷ ಶೇಖರ್ ಶೆಟ್ಟಿ, ಆಟೋ ಮಾಲೀಕರ ಮತ್ತು ಚಾಲಕರ ಸಂಘ ದ ಉಪಾಧ್ಯಕ್ಷ ಆನಂದ್ ಶೆಟ್ಟಿ, ರಾಮಚಂದ್ರ ಹೆಬ್ಬಾರ್, ಮಹೇಂದ್ರ, ಸೋಮಯ್ಯ, ಕಿಶೋರ್, ಜ್ಯೋತಿ ಜೈನ್, ಆನಂದ್, ರಾಮು, ಮಲ್ಲಿಕಾಜುನ ಇತರರು ಇದ್ದರು.