ಕಳಸ ಲೈವ್ ವರದಿ
ಹಾವೇರಿಯಲ್ಲಿ ನಡೆದ ೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅವ್ಯವಸ್ಥೆಯಿಂದ ಬೇಸೆತ್ತು ಕಳಸದಿಂದ ತೆರಳಿದ್ದ ಕಳಸ ತಾಲ್ಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಹೋಬಳಿ ಅಧ್ಯಕ್ಷ ಶೇಖರ ಶೆಟ್ಟಿ, ಪ್ರೇಂ ಕುಮಾರ್ , ಮಲ್ಲಿಕಾರ್ಜುನ್ ಮೊದಲನೆ ದಿನವೇ ವಾಪಾಸಾಗಿದ್ದಲ್ಲದೆ, ಅಲ್ಲಿಯ ಅವ್ಯವಸ್ಥೆಯನ್ನು
ಖಂಡಿಸಿ ಚಿಕ್ಕಮಗಳೂರಿನ ಕನ್ನಡಾಭಿಮಾನಿಗಳು ಸೇರಿದಂತೆ ಇತರ ಜಿಲ್ಲೆಯಿಂದ ಆಗಮಿಸಿದ ಕನ್ನಡಾಭಿಮಾನಿಗಳು ಪ್ರತಿಭಟನೆ ನಡೆಸಿದರು.
ದೂರದೂರಿನಿಂದ ಬಂದವರ ವಸತಿ ಮತ್ತಿತ್ತರ ಸೌಕರ್ಯಗಳ ಬಗ್ಗೆ ವಿಚಾರಿಸಲು ವಿಚಾರಣೆ ಕೌಂಟರ್ ಗೆ ಹೋದರೆ ಕೌಂಟರ್ ನಲ್ಲಿ ಕೇಳುವವರೇ ಇಲ್ಲ. ಆನ್ ಲೈನ್ ನಲ್ಲಿ ನೊಂದಣಿ ಮಾಡಿದವರು ನೊಂದಣಿಯ ಬಗ್ಗೆ ವಿಚಾರಿಸಿದರೇ ನೊಂದಣಿ ಕೌಂಟರಿನಲ್ಲಿ ನೊಂದಣಿ ಮಾಡಿಕೊಂಡ ವಿವರಗಳು ಇಲ್ಲ. ವಸತಿ ಸೌಕರ್ಯ ಕಲ್ಪಿಸಿರುವವಲ್ಲಿನ ಅಧಿಕಾರಿಗಳಿಗೆ ಕರೆ ಮಾಡಿದರೇ ಸಂಪರ್ಕಕ್ಕೆ ಸಿಗುತ್ತಿಲ್ಲ. ಹಣ ಕಟ್ಟಿದರೂ ಕೂಡ ನೋಂದಣಿ ಕೌಂಟರ್ ನಲ್ಲಿ ಬ್ಯಾಗ್ ಮತ್ತು ಇತರ ಸೌಲಭ್ಯ ಇಲ್ಲ ಎನ್ನುತ್ತಿದ್ದಾರೆ ಎಂದು ಸಮ್ಮೇಳನದ ನೋಂದಣಿ ಕೌಂಟರ್ ನ ಮುಂದೆ ದಿಡೀರ್ ಪ್ರತಿಭಟನೆ ನಡೆಸಿದರು.
ಅಲ್ಲದೆ ಅಲ್ಲಿಗೆ ತೆರಳಿ ಅಲ್ಲಿ ವಸತಿ ಹಾಗೂ ಇನ್ನಿತರೆ ಸೌಲಭ್ಯ ಸಿಗದೆ ಇರುವುದರಿಂದ ನಮಗೆ ಅಲ್ಲಿ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಆದ್ದರಿಂದ ಒಂದೇ ದಿನದಲ್ಲಿ ನಾವು ವಾಪಾಸಾಗಿದ್ದೇವೆ ಎಂದು ಕಳಸ ಕಸಾಪ ಅಧ್ಯಕ್ಷ ಸತೀಶ್ಚಂದ್ರ ತಿಳಿಸಿದ್ದಾರೆ.