![](https://www.kalasalive.com/wp-content/uploads/2023/01/01ab0357-d971-4368-a210-c72220f542ea-1024x768.jpg)
ಕಳಸ ಲೈವ್ ವರದಿ
ಕಳಸ ವಲಯದ ತೋಟದೂರು ಕಾರ್ಯ ಕ್ಷೇತ್ರದಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮವನ್ನು ಚೆನ್ನಕೇಶವ ಸ್ವಾಮಿ ದೇವಾಲಯ ಬಾಳೆಹೊಳೆಯಲ್ಲಿ ಭಾನುವಾರ ನಡೆಯಿತು.
ಸ್ವಚ್ಚತಾ ಕಾರ್ಯಕ್ರಮಕ್ಕೆ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಚಾಲನೆ ನೀಡಿದರು. ದೇವಸ್ಥಾನದ ಸುತ್ತ ಇದ್ದ ಗಿಡ ಗಂಟಿಗಳನ್ನು ತೆರವು ಮಾಡಿ, ಗುಡಿಸಿ ಸ್ವಚ್ಚ ಗೊಳಿಸಿದರು. ಈ ಕಾರ್ಯದಲ್ಲಿ ನಾಗೇಶ್ ಭಟ್, ನಾಗಬುಷನ್ ಹಾಗೂ ತೋಟ ದೂರು ಕಾರ್ಯ ಕ್ಷೇತ್ರದ ಅಧ್ಯಕ್ಷರಾದ ಮಂಜುನಾಥ್, ಸೇವಾ ಪ್ರತಿನಿಧಿ ಅಭಿμÉೀಕ್, ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣೆ ಘಟಕದ ಕಳಸ ತಾಲೂಕಿನ ಕ್ಯಾಪ್ಟನ್ ಅಜಿತ್, ಸದಸ್ಯರಾದ ಜಗದೀಶ್, ರವಿಶೆಟ್ಟಿ, ಸುಮಂತ್, ಶ್ರೀಕಾಂತ್ ಹಾಗೂ ತಂಡದ ಸದಸ್ಯರು ಭಾಗವಹಿಸಿದ್ದರು.