- ಕಳಸ ಲೈವ್ ವರದಿ
ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಾಷ್ಟ್ರೀಯ ಪರಿಶೀಲನಾ ಮಾನ್ಯತಾ ಪರಿಷತ್(ನ್ಯಾಕ್) ಸಮಿತಿ ‘ಎ’ ಗ್ರೇಡ್ ನೀಡಿದೆ.
ಪೆ 27 ರಂದು ಬೇಟಿ ನೀಡಿದ ನ್ಯಾಕ್ ಸಮಿತಿ ತಂಡ ಕಾಲೇಜಿನ ಅಭಿವೃದ್ದಿ, ಪಠ್ಯ, ಪಠ್ಯೇತರ ಚಟುವಟಿಕೆ ಮಾಹಿತಿ ಕಲೆ ಹಾಕಿತು. ಕಾಲೇಜು ವಿದ್ಯಾರ್ಥಿಗಳ ಬೌದ್ದಿಕ ಮಟ್ಟ ಮತ್ತು ಜ್ಞಾನದ ಕುರಿತು ಚಿಂತನ ಮಂಥನ ನಡೆಸಿತು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮ ವೀಕ್ಷಿಸಿತು.
ಕಾಲೇಜಿನ ಪ್ರಾಚಾರ್ಯರ ಕೊಠಡಿ, ಭೋಧನಾ ಕೊಠಡಿಗಳನ್ನು ಪರಿಶೀಲಿಸಿ ಕಾಲೇಜಿನ ಅಭಿವೃದ್ದಿ ಕಾರ್ಯಗಳು, ವಿದ್ಯಾರ್ಥಿಗಳ ಸಂಖ್ಯೆ, ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪಲಿತಾಂಶ, ಕಾಲೆಜಿನಲ್ಲಿರುವ ಸಮಿತಿಗಳು, ಕಲೆ, ಕ್ರೀಡೆ, ಶಿಸ್ತುಬದ್ಧ ಕಾರ್ಯವೈಖ್ಯರಿ ಸೇರಿದಂತೆ 5 ವರ್ಷಗಳ ಶೈಕ್ಷಣಿಕ ವಿಷಯದ ಸಾಧನೆ ಕುರಿತು ಸಂಪೂಣ್ ಮಾಹಿತಿ ಕಲೆ ಹಾಕಿದರು.
ಕಾಲೇಜು ವಿದ್ಯಾರ್ಥಿಗಳ ಪಾಲಕರು ಮತ್ತು ಹಳೆವಿದ್ಯಾರ್ಥಿಗಳ ಸಭೆ, ನಡೆಸಿದ ನ್ಯಾಕ್ ಸಮಿತಿಯ ತಂಡ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಸಂಯೋಜಕರು, ಬೋಧಕ, ಬೋಧಕೇತರ ಸಭೆ ನಡೆಸಿ ಎಲ್ಲಾ ವಿಭಾಗದ ಸಾಧನೆ ಮತ್ತು ಮುಂದಿನ ಗುರಿ ಮಾಹಿತಿ ಸಂಗ್ರಹಿಸಿತು. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ಕೈಗೊಂಡ ಕ್ರಮ ಹಾಗೂ ಕಾಲೇಜಿನ ವಸ್ತು ಸ್ಥಿತಿಯನ್ನು ಅಂಕಿ ಅಂಶಗಳ ಸಹಿತ ಕಾಲೇಜಿನ ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ಸಮಿತಿಯ ಮುಂದೆ ವರದಿ ಮಂಡಿಸಿದರು.

ಕಳೆದ ಹದಿನೈದು ವರ್ಷಗಳ ಹಿಂದೆಯಷ್ಟೆ ಕಳಸ ಕಾಲೇಜು ಪ್ರಾರಂಭಗೊಂಡಿತ್ತು. ಕಳೆದ ಐದು ವರ್ಷಗಳ ಹಿಂದೆ ನ್ಯಾಕ್ ಸಮಿತಿಯು ಈ ಕಾಲೇಜಿಗೆ ಬೇಟಿ ನೀಡಿ 2.02 ಅಂಕದೊಂದಿಗೆ ಬಿ ಗ್ರೇಡ್ ನೀಡಿತ್ತು. ಕಳೆದ ಐದು ವರ್ಷಗಳ ಸತತ ಪರಿಶ್ರಮದ ಫಲ ಈ ಸಾಲಿನಲ್ಲಿ ಏಳು ಪಾಯಿಂಟ್ ಸ್ಕೇಲ್ನಲ್ಲಿ 3.05 ರ ಸಿಜಿಪಿಎ ಯೊಂದಿಗೆ ಎ ಗ್ರೇಡ್ ಪಡೆದುಕೊಂಡಿದೆ.
ನ್ಯಾಕ್ ಸಮಿತಿ 5 ವರ್ಷಕ್ಕೊಮ್ಮೆ ಪ್ರಥಮ ದರ್ಜೆ ಕಾಲೇಜುಗಳಿಗೆ ಬೇಟಿ ನೀಡಿ ಶೈಕ್ಷಣಿಕ ಪ್ರಗತಿ ಪರಿಶೀಲಿಸಿ ಗ್ರೇಡ್ ನೀಡುತ್ತದೆ.ಗ್ರೇಡ್ ಆಧರಿಸಿ ವಿಶ್ವ ವಿದ್ಯಾಲಯ ಅನುದಾನ ಸಮಿತಿ(ಯುಜಿಸಿ) ಕಾಲೇಜಿನ ಮತ್ತಷ್ಟು ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡುತ್ತದೆ. ಎ ಶ್ರೇಣಿ ಮಾನ್ಯತೆಯಿಂದ ಕಾಜೇಜಿನ ಅಭಿವೃದ್ದಿ ವೇಗ ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದೆ.
ನಿರೀಕ್ಷೆ ಮಾಡದ ಪಲಿತಾಂಶ ಬಂದಿದೆ. ಇದಕ್ಕಾಗಿ ನಾವು ಐದು ವರ್ಷಗಳಿಂದಲೂ ಪ್ರಯತ್ನವನ್ನು ಮಾಡಿದ್ದೇವೆ. ಕಾಲೇಜು ಅಭಿವೃದ್ದಿ ಸಮಿತಿ ಮತ್ತು ಊರಿನ ಜನರ ಸಹಕಾರದಿಂದ ಎ ಗ್ರೇಡ್ ಸಿಗಲು ಕಾರಣವಾಗಿದೆ.ಎ ಗ್ರೇಡ್ ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಕಾಲೇಜಿನ ಅಭಿವೃದ್ಧಿಗೊಳಿಸಲು ಹೆಚ್ಚಿನ ಸಹಕಾರಿಯಾಗಲಿದೆ ಎಂದು ಕಾಲೇಜು ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ಹೇಳುತ್ತಾರೆ.


