ಕಳಸ ಲೈವ್ ವರದಿ
ಕಳಸ ಎ.ಆರ್. ಪ್ರೆಂಡ್ಸ್ ಆಶ್ರಯದಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ವಿನ್ನರ್ ಆಗಿ ಕಳಸದ ಎ.ಆರ್. ಪ್ರೆಂಡ್ಸ್ ರನ್ನರ್ ಆಗಿ ಎ.ಎಫ್.ಸಿ ತಂಡ ಹೊರ ಹೊಮ್ಮಿದೆ.
ವಿನ್ನರ್ ತಂಡ ಆಕರ್ಷಕ ಟ್ರೋಫಿ ಜೊತೆ 31,111 ರೂ ಹಾಗೂ ರನ್ನರ್ ತಂಡ ಆಕರ್ಷಕ ಟ್ರೋಫಿ ಜೊತೆ 21,111 ರೂಗಳನ್ನು ಪಡೆದುಕೊಂಡರು.

ಕಳಸದ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಕಳಸ ಮತ್ತು ಬಾಳೂರು ಆಟಗಾರರ ಅದ್ದೂರಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 24 ತಂಡಗಳು ಬಾಗವಹಿಸಿದ್ದವು ಅಂತಿಮವಾಗಿ ಎ.ಆರ್. ಪ್ರೆಂಡ್ಸ್ ಮತ್ತು ಎಎಪ್ಸಿ ತಂಡಗಳು ಪೈನಲ್ ಪ್ರವೇಶಿಸಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಎಎಪ್ಸಿ 26 ಓಟಗಳ ಟಾರ್ಗೆಟ್ ನೀಡಿತ್ತು.

ಇದನ್ನು ಬೆನ್ನಟ್ಟಿದ ಎ.ಆರ್. ಪ್ರೆಂಡ್ಸ್ ಅಂತಿಮ ಒವರಿನ ಎರಡು ಬಾಲ್ ಉಳಿಸಿಕೊಂಡು ವಿಜಯದ ನಗೆ ಬೀರಿತು.ಮ್ಯಾನ್ ಆಪ್ ದಿ ಮ್ಯಾಚ್ ನವೀನ್, ಉತ್ತಮ ಕ್ಷೇತ್ರ ರಕ್ಷಕ ಅಶೋಕ್, ಬೆಸ್ಟ್ ಕೀಪರ್ ಸುನೀಲ್ ಸಂಪಾನೆ, ಡೀಸೆಂಟ್ ಪ್ಲೇಯರ್ ಅಲೋಕ್, ಬೆಸ್ಟ್ ಬೌಲರ್ ಯತೀಶ, ಉತ್ತಮ ದಾಂಡಿಗ ಪ್ರಭು, ಸರ್ವಾಂಗೀಣ ಆಟಗಾರ ಶ್ರೀಲಕ್ ಪಡೆದುಕೊಂಡರು.
ಈ ಸಂದರ್ಭದಲ್ಲಿ ಆದರ್ಶ, ರಾಜೇಶ್, ವಿಶ್ವನಾಥ್, ಮಹಮ್ಮದ್ ರಫೀಕ್, ಅರುಣ್, ಭಾಸ್ಕರ್, ನಾರಾಯಣ, ಸುಜಿತ್, ಶ್ರೇಣಿಕ್, ಶಿವಪ್ರಸಾದ್, ಗೋಪಾಲ್, ಸತ್ಯೇಂದ್ರ ಇತರರು ಇದ್ದರು.



