ಕಳಸ ಲೈವ್ ವರದಿ
ಇಲ್ಲಿನ ಕಲ್ಲುಬಾವಿ ಅಂಗನವಾಡಿ ಕೇಂದ್ರದ ವತಿಯಿಂದ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಮತ್ತು ಮಹಿಳಾ ದಿನಾಚರಣೆಯನ್ನು ಬುಧವಾರ ಪಟ್ಟಣದ ದುರ್ಗಾ ಮಂಟಪದಲ್ಲಿ ನಡೆಸಲಾಯಿತು.

ಪುಟ್ಟ ಪುಟ್ಟ ಚಿಣ್ಣರು ವಿವಿಧ ಮಹನೀಯರ, ರೈತ, ಶ್ರೀರಾಮ, ಕೃಷ್ಣ, ಮತ್ಸಾವತಾರ, ದುರ್ಗೆ, ಪೊಲೀಸ್ ಮುಂತಾದ ವೇಷ ಭೂಷಣಗಳನ್ನು ತೊಟ್ಟು ನೋಡುಗರ ಗಮನ ಸೆಳೆದರು.
ಛದ್ಮ ವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪ್ರಣವಿ ಪಿ ಜೋಯಿಸ್, ದಿತೀಯ ಆರ್ವಿ ವಿ ಶೆಟ್ಟಿ, ತೃತಿಯ ಸ್ಥಾನವನ್ನು ವೃದ್ಧಿ ಹೆಬ್ಬಾರ್ ಪಡೆದುಕೊಂಡರು.

ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲಾ ಪುಟಾಣಿಗಳಿಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಪ್ರಣವಿ ಪಿ ಜೋಯಿಸ್ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಹಸೀನಾ, ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಮಹಿಳಾ ಅಧ್ಯಕ್ಷೆ ಮಮ್ತಾಜ್ ಬೇಗಂ, ಪ್ರಥಮ ಧರ್ಜೆ ಕಾಲೇಜು ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ, ಕವಿಯತ್ರಿ ಗೀತಾ, ಅಂಗನವಾಡಿ ಕಾರ್ಯಕರ್ತೆ ಸರೋಜ, ಸಹಾಯಕಿ ನಿರ್ಮಲ ಇತರರು ಇದ್ದರು.

