ಕಳಸ ಲೈವ್ ವರದಿ
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣ ದಲ್ಲಿ 2023ನೇ ಶಾಲಿನ ಎಸ್. ಎಸ್. ಎಲ್. ಸಿ.ಪರೀಕ್ಷಾ ಕೇಂದ್ರ ಕ್ಕೆ ಬಂದ ತಾಲ್ಲೂಕಿನ 382 ವಿದ್ಯಾರ್ಥಿಗಳಿಗೆ ಪುಷ್ಪಗಿರಿ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಸಿಹಿ ಹಂಚಿ ಸ್ವಾಗತಿಸಲಾಯಿತು.

ಕಳಸ ಪೊಲೀಸ್ ಠಾಣೆಯ ಸಹಾಯಕ ಸಬ್ಇನ್ಸ್ಪೆಕ್ಟರ್ ಡಾ. ಸಿ ಆರ್.ಮೋಹನ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳಿಗೆ ನೈತಿಕ ಸ್ಟೈರ್ಯ ತುಂಬಿ ಪರೀಕ್ಷೆ ಯನ್ನು ಅತ್ಯುತ್ತಮ ರೀತಿಯಲ್ಲಿ ಬರೆಯುವ ಆತ್ಮವಿಶ್ವಾಸ, ಶಕ್ತಿ, ಅರೋಗ್ಯ ನಿಮಗೆಲ್ಲರಿಗೂ ದೇವರು ಕರುಣಿಸಲಿ ಉತ್ತಮ ಅಂಕಗಳನ್ನು ಪಡೆದು ಕಲಿತ ಶಾಲೆಗೆ, ಹುಟ್ಟಿದ ಊರಿಗೆ, ಶಿಕ್ಷಕರಿಗೆ, ಜನ್ಮ ಕೊಟ್ಟ ತಂದೆ ತಾಯಿಗಳಿಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.

ಪಿಎಸ್ಐ ಗಜೇಂದ್ರ, ಪೆÇಲೀಸ್ ಚಂದ್ರಶೇಖರ, ಶಿವಕುಮಾರ್, ಉಮೇಶ್, ಕೆ ಪಿ ಎಸ್ ಶಾಲೆ ಮುಖ್ಯ ಶಿಕ್ಷಕ ಶಿವಕುಮಾರ ಸ್ವಾಮಿ, ಸಂಸೆ ಮುಖ್ಯ ಶಿಕ್ಷಕ ಲೋಕೇಶ್ ಸತೀಶ್, ಹೊರನಾಡು ಶಾಲೆ ಮುಖ್ಯ ಶಿಕ್ಷಕ ಗೋವಿಂದಪ್ಪ, ಪ್ರಬೋಧಿನಿ ವಿದ್ಯಾ ಕೇಂದ್ರದ ಮುಖ್ಯ ಶಿಕ್ಷಕ ಆನಂದ ಗುರೂಜಿ, ಸಂದೇಶ್ ಆಚಾರ್ಯ, ಮಂಜುನಾಥ್, ರವಿಕುಮಾರ್, ಆನಂದ, ಶೃಂಗೇಶ್, ಉದಯ್, ಮಹಮದ್ ಸಾದಿಕ್, ಶ್ರೀಮತಿ ಹೇಲನ್, ದಿವ್ಯ ಕರ್ದೋಜಾ, ಶ್ರೀಮತಿ ಮೇನಕಾ ಮಲ್ಲಿಕಾರ್ಜುನ, ಶಿಕ್ಷಕ ಪುರುಷೋತ್ತಮ ಇದ್ದರು.



