ಕಳಸ ಲೈವ್ ವರದಿ
ಸಂಸೆ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಇಂದ್ರ ಪ್ರತಿಪ್ಠೆ ತೋರಣ ಮುಹೂರ್ತ, ವಿಮಾನಶುದ್ಧಿ, ಕ್ಷೀರಾಭಿಷೇಕ, ಯಕ್ಷ ಪ್ರತಿಷ್ಠೆ, ಧ್ವಜಾರೋಹಣ ಮಾಡುವುದರ ಮುಖಾಂತರ ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಎ 1ರಂದು ವಸಂತ ಅಶ್ವಥಕಟ್ಟೆ ಪೂಜೆ ಪಂಚಾಮೃತ ಅಭಿಷೇಕ, ಸಾಯಂಕಾಲ ಮೈ ಸಂಗ್ರಹಣ, ಅಂಕುರಾರ್ಪಣ, ಮಂಗಲ ಸೂತ್ರ ಬಂಧನ, ಧ್ವಜಮರ ಪೂಜೆ, ಶ್ರೀಬಲಿ, ಸಂಜೆ ನಾಗಾರಾದನೆ, ರಾತ್ರಿ ಶ್ರೀ ಸರ್ವಾಹ್ಮಯಕರ ಪಲ್ಲಕ್ಕಿ ಶ್ರೀವಿಹಾರ, ವಸಂತ ಸಂಪಿಗೆಕಟ್ಟೆ ಪೂಜೆ, ಅರಮನೆ ಬಸದಿ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಬೆಳಿಗ್ಗೆ ಸರ್ವದೋಷ ನಿವಾರಣ ಅರಾಧನೆ.

ಎ 02 ರಂದು ಬೆಳಿಗ್ಗೆ ಶ್ರೀ ಬ್ರಹ್ಮಯಕ್ಷ ದೇವರಿಗೆ ಆರಾಧನಾಪೂರ್ವಕ ಕಲಾರೋಪಣೆ, ನಯನೋಮ್ಮಿಲನ, ರಾತ್ರಿ ಶ್ರೀ ಪೀಠ ಯಂತ್ರಾರಾಧನೆ, ಧ್ವಜಮರ ಪೂಜೆ, ಶ್ರೀಬಲಿ, ಶ್ರೀ ಸರ್ವಾಹ್ನ ಯಕ್ಷರ ಪಲ್ಲಕ್ಕಿ ಶ್ರೀವಿಹಾರದೊಂದಿಗೆ ವಸಂತಕಟ್ಟೆಪೂಜೆ,
ಎ 3ರಂದು ನಿತ್ಯವಿಧಿ ಸಹಿತ ಶ್ರೀಬಲಿವಿಧಾನ, ಶ್ರೀ ಪದ್ಮಾವತಿ ಅಮ್ಮನವರಿಗೆ ಮತ್ತು ಶ್ರೀ ವರಮಹಾಲಕ್ಷ್ಮಿ ಅಮ್ಮನವರಿಗೆ ಕಲಾರೋಪಣೆ ಮತ್ತು ನಯನೋಮ್ಮಿಲನ, ಸಾಯಂಕಾಲ ಧ್ವಜಮರ ಪೂಜೆ, ಶ್ರೀ ಯಕ್ಷರ ಪಲ್ಲಕ್ಕಿ ಶ್ರೀವಿಹಾರದೊಂದಿಗೆ ವಸಂತಕಟ್ಟೆಪೂಜೆ,

ಎ 04ರಂದು ಬೆಳಿಗ್ಗೆ ಬಸದಿಯ ಮೇಗಿನ ನೆಲೆಯ ಭಗವಾನ್ ಶ್ರೀ ಮಹಾವೀರ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ ಬೆಳಿಗ್ಗೆ “ಶಾಂತಿಚಕ್ರಯಂತ್ರಾರಾಧನೆ” ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ 52ನೇ ವಾರ್ಷಿಕೋತ್ಸವ ಪ್ರಯುಕ್ತ 54 ಕಲಶ ಸ್ನಪನೆ ಹಾಗೂ ಭಗವಾನ್ 1008 ಶ್ರೀ ಮಹಾವೀರ ಸ್ವಾಮಿಯವರ ಜನ್ಮ ಜಯಂತಿ ಪ್ರಯುಕ್ತ ಲಾಲಿಕೆ ಪಲ್ಲಕ್ಕಿ, ಭಜನೆಯೊಂದಿಗೆ ವೈಭವೋಪೇತ ಪುರಮೆರವಣಿಗೆ, 24 ಕಲಶಗಳಿಂದ ಪಾಂಡುಕಾಶಿಲೆಯಲ್ಲಿ ಜನ್ಮಾಭಿμÉೀಕ, ಸಾಯಂಕಾಲ ಧ್ವಜಮರ ಪೂಜೆ, ಶ್ರೀಬಲಿ, ಉತ್ಸವ.

ಎ 05ರಂದು ನಿತ್ಯವಿಧಿ ಸಹಿತ ಶ್ರೀ ಬಲಿ ವಿಧಾನ, ಸಾಯಂಕಾಲ “ಕಲಿಕು0ಡ ಯಂತ್ರಾರಾಧನೆ”, ಧ್ವಜಮರ ಪೂಜೆ, ಶ್ರೀಬಲಿ ವಿಧಾನ, ರಾತ್ರಿ ಶ್ರೀ ಬ್ರಹ್ಮದೇವರ “ದಿಂಡಿ ಮಹೋತ್ಸವ”,
ಎ 06ರಂದು ಬೆಳಿಗ್ಗೆ ಬಸದಿಯಲ್ಲಿ ಭಗವಾನ್ ಶ್ರೀ ರಂಗನಾಥ ಸ್ವಾಮಿಗೆ ಕ್ಷೀರಾಭಿಷೇಕ ಮತ್ತು ಮಹಾನ್ ಸಂಜೆ ಭಗವಾನ್ ಶ್ರೀ ಪಾಶ್ರ್ವನಾಥ ಸ್ವಾಮಿಗೆ 24 ಕಲಶಗಳಿಂದ ಮಹಾಭಿಷೇಕ, ಮಧ್ಯಾಹ್ನ ಭಗವಾನ್ ಶ್ರೀ ಶಾಂತಿನಾಥ ತೀರ್ಥಂಕರರ ಮತ್ತು ಶ್ರೀ ವರಮಹಾಲಕ್ಷ್ಮೀ ಅಮ್ಮನವರ ರಥಾರೋಹಣ, ಸಂಜೆ ಗಂಟೆ 7-00ರಿಂದ ಧಾರ್ಮಿಕ ಸಭೆ, ಸಮವಸರಣ ಪೂಜೆ, ಶ್ರೀ ಪದ್ಮಾವತಿ ಅಮ್ಮನವರ ಉಯ್ಯಾಲೆ ಸೇವೆ ಮತ್ತು ತುಲಾಭಾರ ಸೇವೆ, ರಾತ್ರಿ ದೇವರಮನೆ ಮಾತೃ ಸನ್ನಿದಾನದಲ್ಲಿ ನಡೆಯುವ ತೊಟ್ಟಿಲು ಜೋಡಿ ಅಮ್ಮನವರ ಸೇವೆ ಶ್ರೀ ಪದ್ಮಾವತಿ ಅಮ್ಮನವರ ಬಿಜಯ, ಮಲ್ಲೇಶ್ವರ ಭಂಡಾರದ ಮನೆಯಿಂದ ಧರ್ಮದೇವತೆಗಳ ಭಂಡಾರ ಪಲ್ಲಕ್ಕಿಯಲ್ಲಿ ಹಿತ್ತಲಮಕ್ಕಿಗೆ ಬಸವನೊಂದಿಗೆ ಬಂದು ಅಮ್ಮನವರನ್ನು ಎದುರುಗೊಂಡು ದೈವಗಳ ದರ್ಶನ ನಂತರ ದೈವ ಪಾತ್ರಿಗಳೊಂದಿಗೆ ಮೆರವಣಿಗೆಯಲ್ಲಿ ಅರಮನೆ ಚಾವಡಿಗೆ ಬರುವುದು. ಚಾವಡಿಯಿಂದ ದೇವಸ್ಥಾನಕ್ಕೆ ರಾಜಬೀದಿಯಲ್ಲಿ ಲಾಲಿಕೆ, ಜೋಡು ಪಲ್ಲಕ್ಕಿಗಳ ಉತ್ಸವ ದೈವಗಳ ಭಂಡಾರ ಒಕ್ಕಲಾಗುವುದು, ಅನಂತರ ರಥವಿಹಾರ,
ಎ 07ರಂದು ನಿತ್ಯದಿಧಿ ಸಹಿತ ಶ್ರೀ ಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ಹಾಗೂ ಅಮ್ಮನವರ ಮತ್ತು ವರಮಹಾಲಕ್ಷಿ ಸನ್ನಿಧಿಯಲ್ಲಿ ಅಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ ಕುಂಕುಮೋತ್ಸವ, ಕಟ್ಟರು ಬ್ರಹ್ಮಾಂಡದಲ್ಲಿ ಶ್ರೀ ಪದ್ಮಾವತಿ ಅಮ್ಮನವರ ಮತ್ತು ವರಮಹಾಲಕ್ಷ್ಮೀ ಅಮ್ಮನವರ ತೆಪ್ಪೋತ್ಸನ ಹರಕೆ ಸಮರ್ಪಣೆ, ಅರಮನೆಯಲ್ಲಿ ವಸಂತಕಟ್ಟೆ ಪೂಜೆ, ಧ್ವಜಾವರೋಹಣ, ಸಂಪ್ರೋಕ್ಷಣೆ, ಕಂಕಣ ವಿಸರ್ಜನೆ ಹಾಗೂ ರಾತ್ರಿ ಧರ್ಮದೇವತೆಗಳ ನೇಮೊತ್ಸವ ನಡೆಯಲಿರುವುದು.
