ಕಳಸ ಲೈವ್ ವರದಿ
ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂದೂಕು ಪರವಾನಿಗೆ ಹೊಂದಿರುವವರು ಇನ್ನೆರಡು ದಿನದಲ್ಲಿ ತಮ್ಮ ತಮ್ಮ ಬಂದೂಕುಗಳನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸುವಂತೆ ಕಳಸ ಪೊಲೀಸ್ ಠಾಣಾ ಪಿಸೈ ಹರ್ಷವರ್ಧನ್ ತಿಳಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯ ಪ್ರಯುಕ್ತವಾಗಿ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವ ಕಾರಣ ಒಂದೆರಡು ದಿನಗಳ ಒಳಗಾಗಿ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಬಂದೂಕು ಪರವಾನಿಗೆದಾರರು ಕಡ್ಡಾಯವಾಗಿ ಡೆಪಾಸಿಟ್ ಮಾಡಬೇಕು.

ಒಂದು ವೇಳೆ ಡೆಪಾಸಿಟ್ನಿಂದ ವಿನಾಯಿತಿ ಬೇಕಾಗಿದ್ದಲ್ಲಿ ಮೊದಲು ಠಾಣೆಗೆ ಡೆಪಾಸಿಟ್ ಮಾಡಿ ನಂತರದಲ್ಲಿ ಜಿಲ್ಲಾಧಿಕಾರಿಗಳವರಿಂದ ಅನುಮತಿ ಪಡೆದು ವಾಪಸ್ ತೆಗೆದುಕೊಂಡು ಹೋಗಬಹುದು ಎಂದು ತಿಳಿಸಿದ್ದಾರೆ.

