ಕಳಸ ಲೈವ್ ವರದಿ
ವಿನಾಯಕ ಭಜನಾ ಮಂಡಳಿ ಮರಸಣಿಗೆ ಇವರ ಆಶ್ರಯದಲ್ಲಿ 20 ನೇ ವಾರ್ಷಿಕೋತ್ಸವ ದ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಯಕ್ಷಗಾನ ತಾಳಮದ್ದಳೆ ಮೇ 1ರ ಸೋಮವಾರದಂದು ನಡೆಯಲಿದೆ.

ಅಂದು ಬೆಳಿಗ್ಗೆ 10 ರಿಂದ 1 ಗಂಟೆ ವರೆಗೆ ಸತ್ಯನಾರಾಯಣ ಪೂಜೆ. 2 ಗಂಟೆ ನಂತರ ಮಧುಕುಮಾರ್ ಬೋಳೂರು ವಿರಚಿತ ಸುದರ್ಶನ ವಿಜಯ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳನದಲ್ಲಿ ರಾಘವೇಂದ್ರ ಆಚಾರ್ಯ ಜನಸಾಲೆ ಮತ್ತು ಬಳಗ, ಹಾಗೂ ಮುಮ್ಮೇಳನದಲ್ಲಿ ಸುದರ್ಶನ-ರಾಧಕೃಷ್ಣ ಕಲ್ಚಾರ್, ವಿಷ್ಣು-ಪವನ್ ಕಿರಣಕೆರೆ, ಲಕ್ಷ್ಮೀ-ಹರೀಶ್ ಬಳಂತಿಮೊಗರು, ದೇವೇಂದ್ರ-ಗಣೇಶ್ ಭಟ್ ಹಳುವಳ್ಳಿ, ಶತ್ರುಪ್ರಸೂದನ-ರಜನೀಶ್ ಹೊಳ್ಳ ಕೆಂಪಿನಮಕ್ಕಿ ಇರಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಾಯಕ ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಕೇಳಿಕೊಂಡಿದ್ದಾರೆ.

