ಕಳಸ ಲೈವ್ ವರದಿ
ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಮನೆ ಮುಳ್ಳೋಡಿ ನಿವಾಸಿ ಮಂಜುನಾಥ್ ಇವರ ಚಿಕಿತ್ಸೆಗಾಗಿ ಸಹೃದಯ ದಾನಿಗಳ ನೆರವಿಗಾಗಿ ಕುಟುಂಬ ಕೇಳಿಕೊಂಡಿದೆ.
ಕೃಷಿ ಕೆಲಸ ಮಾಡಿಕೊಂಡು ಕುಟುಂಬದ ನಿರ್ವಹಣೆಯನ್ನು ಹೊತ್ತಿದ್ದ ಮಂಜುನಾಥ್ ಅವರು ತಮ್ಮ ಮನೆಯ ಆಧಾರಸ್ತಂಭವಾಗಿ ಇದ್ದರು. ಆದರೆ ತಮ್ಮ ಎರಡೂ ಕಿಡ್ನಿಯ ವೈಫಲ್ಯ ದಿಂದ ಇದೀಗ ಯಾವುದೇ ಕೆಲಸವನ್ನು ಮಾಡಲು ಆಗದೆ ಕಷ್ಟವನ್ನು ಅನುಭವಿಸುತ್ತಿದ್ದಾರೆ. ತಂದೆ ತಾಯಿಗೆ ಒಬ್ಬನೇ ಮಗನಾಗಿ ಸಂಸಾರ ನಡೆಸುತ್ತಿದ್ದ ಇವರು ಕಳೆದ ಒಂದೂವರೆ ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಆರು ತಿಂಗಳ ಹೆಣ್ಣು ಮಗುವನ್ನು ಹೊಂದಿರುತ್ತಾರೆ. ತಂದೆ ಪಾಶ್ರ್ವವಾಯು ಕಾಯಿಲೆಯಿಂದ ಬಳಲುತಿದ್ದು, ಈಗ ತಾಯಿಯ ಮೇಲೆ ಇಡೀ ಕುಟುಂಬದ ನಿರ್ವಹಣೆ ಬಿದ್ದಿದೆ. ಮಂಜುನಾಥರ ಈ ಕಿಡ್ನಿ ವೈಫಲ್ಯ ದ ಬಗ್ಗೆ ತೀವ್ರ ಮನನೊಂದಿರುವ ಈ ಕುಟುಂಬಕ್ಕೆ ಸಹಾಯ ಮಾಡುವ ಕರ್ತವ್ಯ ಈಗ ಸಮಾಜದ್ದಾಗಿದೆ.ಇವರ ಚಿಕಿತ್ಸೆಗೆ ಹದಿನೈದು ಲಕ್ಷಕ್ಕಿಂತಲೂ ಅಧಿಕ ಹಣ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿರುವುದರಿಂದ ಸಹೃದಯ ದಾನಿಗಳ ನೆರವನ್ನು ಈ ಬಡ ಕುಟುಂಬದ ನಿರೀಕ್ಷಿಸುತ್ತಿದೆ.
ಹೆಚ್ಚಿನ ಮಾಹಿತಿ ಬೇಕೆದ್ದರೆ ಈ ಮೊಬೈಲ್ ನಂಬರ್ ಅನ್ನು ಸಂಪರ್ಕಿಸಿ: 6360084532
ನೆರವು ನೀಡುವ ದಾನಿಗಳು
ಗೂಗಲ್ ಪೇ ಮತ್ತು ಪೋನ್ ಪೇ 6360084532
ಕರ್ನಾಟಕ ಬ್ಯಾಂಕ್ ಕಳಸ
Ac no-40225001019611010
Ifcs KARB 0000402
