ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಹಿರೇಬೈಲು ನಿವಾಸಿ ಸೋಮ(56) ಎಂಬುವವರು ಶೃಂಗೇರಿಯಲ್ಲಿ ತನ್ನ ಸಂಬಂಧಿಕರ ಮದುವೆಗೆಂದು ಹೋದವರು ಮನೆಗೆ ಮರಳಿ ಬರಲಿಲ್ಲ.
ಮೇ 29 ರಂದು ಬೆಳಿಗ್ಗೆ 10 ಗಂಟೆಗೆ ಶೃಂಗೇರಿಯಲ್ಲಿರುವ ತನ್ನ ಸಂಬಂಧಿಕರ ಮದುವೆಗೆ ಹೋಗಿ ಬರುವುದಾಗಿ ಪತ್ನಿ ಲಕ್ಷ್ಮೀರವರಿಗೆ ಹೇಳಿ ಹೋಗಿದ್ದಾರೆ. ಆದರೆ ಹೋದವರು ಇನ್ನು ವಾಪಾಸು ಬಂದಿರುವುದಿಲ್ಲ. ಆದ್ದರಿಂದ ಅವರನ್ನು ಹುಡುಕಿಕೊಡಿ ಎಂದು ಕಳಸ ಪೊಲೀಸ್ ಠಾಣೆಗೆ ಸೋಮ ರವರ ಮಗಳು ನೇತ್ರಾ ದೂರು ನೀಡಿದ್ದಾರೆ.
ಸುಮಾರು 4ವರೆ ಅಡಿ ಎತ್ತರವಿದ್ದು, ಕಪ್ಪು ಮೈಬಣ್ಣ, ಬಿಳಿ ಬಣ್ಣದ ಗಡ್ಡ ಬಿಟ್ಟಿರುತ್ತಾರೆ. ಕನ್ನಡ ತುಳು ಬಾಷೆ ಮಾತನಾಡುತ್ತಾರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಕಳಸ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ 08263-274877
