ಕಳಸ ಲೈವ್ ವರದಿ
ಒಡಿಶಾದಲ್ಲಿ ನಡೆದ ರೈಲು ದುರಂತದಲ್ಲಿ ಪ್ರಾಣಾಪಾಯದಿಂದ ಬದುಕುಳಿದು ತೀರ್ಥರಾಜ ಸಂಮ್ಮೇದ್ ಶಿಖರ್ಜಿ ಹಾಗೂ ಸಿದ್ದ ಕ್ಷೇತ್ರಗಳ ಯಾತ್ರೆ ಮುಗಿಸಿ ಮರಳಿ ಬರುತ್ತಿದ್ದ ವೇಳೆ ಕಳಸ ತಾಲೂಕಿನ ಕಳಕೋಡು ಬಸ್ತಿಕೇರಿಯ ಧರ್ಮಪಾಲಯ್ಯ (72) ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕಳಸ, ಹೊರನಾಡು, ಸಂಸೆ ಭಾಗಗಳಿಂದ 110 ಜನ ಜೈನ ಸಮುದಾಯದವರು ತೀರ್ಥರಾಜ ಸಂಮ್ಮೇದ್ ಶಿಖರ್ಜಿ ಹಾಗೂ ಸಿದ್ದ ಕ್ಷೇತ್ರಗಳಿಗೆ ತೀರ್ಥಯಾತ್ರೆಯನ್ನು ಕೈಗೊಂಡು, ಬಳಿಕ ಯಾತ್ರೆ ಮುಗಿಸಿ ಯಾತ್ರೆ ಮುಗಿಸಿ ಪಾಟ್ನಾದಿಂದ ರೈಲಿನಲ್ಲಿ ಬರುತ್ತಿರುವಾಗ ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ಸ್ಟೇಷನ್ನಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಒಡಿಶಾದಲ್ಲಿ ತ್ರಿವಳಿ ರೈಲು ದುರಂತ ನಡೆದ ಸಂದರ್ಭದಲ್ಲಿ ಯಾತ್ರೆಗೆ ತೆರಳುತ್ತಿದ್ದ ಕಳಸ ಭಾಗದ 110 ಜನರೂ ಇದ್ದರು.ಆ ಸಂದರ್ಭದಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.ಆದರೆ ಅಂದು ಕಣ್ಣಾರೆ ಕಂಡ ನಡೆದ ಘಟನೆ ಧರ್ಮಪಾಲ್ ಅವರ ಮನಸ್ಸಿಗೆ ಘಾಸಿಗೊಳಿಸಿತ್ತು.ಈ ಘಟನೆಯ ಶಾಕ್ ನಿಂದ ಅವರು ಹೊರ ಬಂದಿರಲೇ ಇಲ್ಲ.ಈ ಘಟನೆಯ ಶಾಕ್ ನಿಂದಲೇ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ.
