ಕಳಸ ಲೈವ್ ವರದಿ
ಜೆಸಿಐ ವಲಯ 14ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಕಳಸ ಜೆಸಿಐ ಘಟಕವು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿತು.

ಜೆಸಿಐ ಬೀರೂರು ಘಟಕದ ಆತಿಥ್ಯದಲ್ಲಿ ಭಾನುವಾರ ಬೀರೂರಿನಲ್ಲಿ ನಡೆದ ಜೆಸಿಐ ಮಧ್ಯವಾರ್ಷಿಕ ಸಮ್ಮೇಳನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವಯಕ್ತಿಕ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಘಟಕಾಧಿಕಾರಿ ಸುಧಾಸ್ ಕೆಫೆ ಮಾಲಿಕ ಸುಧಾಕರ್ ಪ್ರಶಸ್ತಿಯನ್ನು ಪಡೆದುಕೊಂಡರು.ವಲಯ ವಿಭಾಗದ ಚಾರಣ ಕಾರ್ಯಕ್ರಮ, ಅತ್ಯುತ್ತಮ ಘಟಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಕಳಸ ಘಟಕ ಪಡೆದುಕೊಂಡಿತು.
ವಲಯ ಉಪಾಧ್ಯಕ್ಷರಾದ ಕಳಸ ಘಟಕದ ಪ್ರಶಾಂತ್ ಹೆಚ್.ಆರ್ ಮಧ್ಯವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದು ಕೂಡ ಕಳಸ ಘಟಕಕ್ಕೆ ಒಂದು ಹಿರಿಮೆಯಾಗಿತ್ತು.ಪ್ರಶಸ್ತಿಯನ್ನು ವಲಯಾಧ್ಯಕ್ಷೆ ಯಶಸ್ವಿನಿ, ವಲಯ ಉಪಾಧ್ಯಕ್ಷ ನೆಲ್ಸನ್ ಇವರಿಂದ ಪ್ರಶಸ್ತಿಯನ್ನು ಸ್ವೀಕರಿಸಲಾಯಿತು.

ಕಳಸ ಜೆಸಿಐ ಅಧ್ಯಕ್ಷ ಚರಣ್, ಸ್ಥಾಪಕ ಅಧ್ಯಕ್ಷ ಜಗದೀಶ್ ನಾಯ್ಕ್, ಪೂರ್ವಧ್ಯಕ್ಷರಾದ ಅಶೋಕ್ ಜಾವಳಿ, ಕೆ.ಸಿ.ಮಹೇಶ್, ಕಾರ್ಯದರ್ಶಿ ಶ್ರೀಕಾಂತ್, ಸುಧಾಕರ್, ಶಿವಪ್ರಸಾದ್, ಮುರುಳಿ, ಜಯಪ್ರಕಾಶ್ ಈ ಸಂದರ್ಭದಲ್ಲಿ ಇದ್ದರು.
