ಕಳಸ ಲೈವ್ ವರದಿ
ಬೀಡಾಡಿ ಜಾನುವಾರುಗಳ ಗುದ್ದಾಟದಿಂದ ಒಂದು ಹಸು ಪ್ರಾಣ ಕಳೆದುಕೊಂಡಿದ್ದು, ಅಂಗನವಾಡಿ ಕಾರ್ಯಕರ್ತೆಗೆ ಗಾಯಗಳಾದ ಘಟನೆ ಕಳಸದ ಕೈಮರದಲ್ಲಿ ಗುರುವಾರ ನಡೆದಿದೆ.
ಕಳಸ ಕೈಮರದ ಮುಖ್ಯ ರಸ್ತೆಯಲ್ಲಿ ಪ್ರತಿ ದಿನ ಹಿಂಡುಗಟ್ಟಲೆ ಜಾನುವಾರಗಳಿದ್ದು ಒಂದಕ್ಕೊಂದು ಗುದ್ದಾಡಿಕೊಂಡು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ನಿತ್ಯವೂ ಕಿರುಕುಳ ಉಂಟಾಗಿದೆ.
ಗುರುವಾರ ಬೆಳಿಗ್ಗೆ ಕೈಮರದಲ್ಲಿ ಮಾವಿನಕೆರೆ ಅಂಗನವಾಡಿ ಕಾರ್ಯಕರ್ತೆ ಶಾರದ ಎಂಬುವವರು ನಡೆದುಕೊಂಡು ಹೋಗುವಾಗ ಜಾನುವಾರಗಳ ಹಿಂಡು ಪರಸ್ಪರ ಗುದ್ದಾಡಿ ಕಾರ್ಯಕರ್ತೆಗೂ ಗುದ್ದಿದೆ. ಗಾಯವಾಗಿದ್ದ ಕಾರ್ಯಕರ್ತೆಯನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು.ಅಲ್ಲದೆ ಪರಸ್ಪರ ಗುದ್ದಾಡಿದ ಜಾನುವಾರುಗಳ ಹಿಂಡಿನಲ್ಲಿದ್ದ ಹಸುವೊಂದು ರಸ್ತೆಯಿಂದ ಕೆಳಗಡೆ ಬಿದ್ದ ಪರಿಣಾಮ ಪ್ರಾಣ ಕಳೆದುಕೊಂಡಿದೆ.
ಪ್ರತಿ ನಿತ್ಯವೂ ಇಲ್ಲಿ ಜಾನುವಾರುಗಳ ಉಪಟಳದಿಂದ ನಿತ್ಯ ಏನಾದರೊಂದು ಅನಾಹುತಗಳು ನಡೆಯುತ್ತಲೇ ಇದೆ. ಕೂಡಲೇ ಇದಕ್ಕೆ ಸಂಬಂಧಪಟ್ಟವರು ಜಾನುವಾರುಗಳಿಂದ ಗ್ರಾಮಸ್ಥರಿಗೆ ರಕ್ಷಣೆ ಕೊಡಬೇಕು ಎಂದು ಕೈಮರ ನಿವಾಸಿ ವಿಜಯ್ ಆಗ್ರಹಿಸಿದ್ದಾರೆ.
