
ಕಳಸ ಲೈವ್ ವರದಿ
ಕಳಸ ಪಟ್ಟಣದ ಮಂಜಿನಕಟ್ಟೆ ಬಳಿ ಬೃಹತ್ ಗಾತ್ರದ ಲಾರಿ ನಿಯಂತ್ರಣ ತಪ್ಪಿ ಪುಟ್ ಪಾತ್ ಏರಿದ ಘಟನೆ ಸೋಮವಾರ ಸಂಜೆ ನಡೆಯಿತು.
ಕಳಸ ತಾಲ್ಲೂಕಿನಲ್ಲಿ ಚರಂಡಿ ದುರಸ್ಥಿ ಮಾಡಲು ಬಂದಿದ್ದ ಹಿಟಾಚಿಯನ್ನು ಹೊತ್ತು ತಂದಿದ್ದ ಬೃಹತ್ ಲಾರಿ ಹಿಟಾಚಿಯನ್ನು ಕೆಳಗಿಳಸಿ ಕಳಸ ಮುಖ್ಯ ರಸ್ತೆಯಲ್ಲಿ ಬಂದಿತ್ತು.
ಕಳಸ ಮಂಜಿನಕಟ್ಟೆ ಬಳಿ ಲಾರಿ ತಿರುಗಿಸಲು ಸಾಧ್ಯವಾಗದ ಕಾರಣ ಪುಟ್ ಪಾತ್ ಮೇಲೆ ಹತ್ತಿದೆ. ಪುಟ್ ಪಾತ್ ಚಪ್ಪಡಿಗಳು ತುಂಡಾಗಿದ್ದು, ಸ್ಥಳಿಯರ ನೆರವಿನಿಂದ ಲಾರಿಯನ್ನು ಪುಟ್ ಪಾತ್ ನಿಂದ ಕೆಳಗಿಳಿಸಲಾಯಿತು. ಇದರಿಂದ ಪಟ್ಟಣದಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರ ನೆರವಿನಿಂದ ಟ್ರಾಫಿಕ್ ತೆರವು ಮಾಡಲಾಯಿತು.