
ಕಳಸ ಲೈವ್ ವರದಿ
ಮಹಿಳೆಯರು ಕಾನೂನು ಜ್ಞಾನ ಪಡೆದುಕೊಳ್ಳುವುದು ಅವಶ್ಯ ವಿದೆ ಎಂದು ಕಳಸ ಪೆÇಲೀಸ್ ಠಾಣೆ ಯ ಪಿಎಸ್ಐ ನಿತ್ಯಾನಂದ ಗೌಡ ಹೇಳಿದರು .
ಅವರು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರೆಸ್ಟ್ (ರಿ )ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯ ಲ್ಲಿ ಅಧ್ಯಯನ ಪ್ರವಾಸ ಕಳಸ ಪೆÇಲೀಸ್ ಠಾಣೆ ಆಗಮಿಸಿದಾಗ ಮಾತನಾಡಿದರು.
ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ. ಸಿ.ಆರ್. ಮೋಹನ್ ಕುಮಾರ್ ರವರು ಪೆÇಲೀಸ್ ಇಲಾಖೆ ಯ ಕರ್ತವ್ಯ ಗಳ ಬಗ್ಗೆ ಮಾಹಿತಿ ನೀಡಿಮತ್ತು ಮಹಿಳೆಗೆ ವಿದ್ಯೆ. ಸಂಸ್ಕಾರ ಅರೋಗ್ಯ ಆಹಾರ ಸೇರಿದಂತೆ ಎಲ್ಲಾ ಜ್ಞಾನ ವು ಅತ್ಯಗತ್ಯ ಈ ಕಾರಣಕ್ಕಾಗಿಯೇ ಜ್ಞಾನ ವಿಕಾಸ ಯೋಜನೆ ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಆದ್ಯತೆ ನೀಡಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಳಸ ಮೇಲ್ವಿಚಾರಕ ಹರೀಶ್, ಜ್ಞಾನ ವಿಕಾಸ ತಾಲ್ಲೂಕು ಮೇಲ್ವಿಚಾರಕಿ ಚೈತ್ರಾ , ಮತ್ತು ಬಣಕಲ್ ಸೇವಾಪ್ರತಿನಿಧಿ ಉμÁ ಇದ್ದರು.