ಕಳಸ ಲೈವ್ ವರದಿ
ಕಳಸ ಕಳಕೋಡು ರಸ್ತೆಯಲ್ಲಿ ತುಂಬಿಕೊಂಡಿದ್ದ ಮಣ್ಣನ್ನು ಗ್ರಾಮಸ್ಥರು ಸೇರಿ ತೆರವು ಮಾಡಿದ್ದಾರೆ.
ಕಳಕೋಡು ರಸ್ತೆಯನ್ನು ಇತ್ತೀಚೆಗೆ ಕಾಂಕ್ರೀಟ್ ಮಾಡಲಾಗಿತ್ತು.ಅದರೆ ರಸ್ತೆ ಪೂರ್ತಿ ತುಂಬಿಹೋಗಿದ್ದ ಮಣ್ಣಿನಿಂದ ರಸ್ತೆ ಕೆಸರುಮಯವಾಗಿತ್ತು.
ಇದರಿಂದ ಶಾಲೆಗೆ ಹೋಗುವ ಮಕ್ಕಳು ತೀರ ತೊಂದರೆ ಪಡುತ್ತಿದ್ದರು. ರಸ್ತೆ ಕಾಮಗಾರಿ ಮಾಡಿ ಮಣ್ಣನ್ನು ಸರಿಯಾಗಿ ತೆರವು ಮಾಡದೆ ಇರುವುದರಿಂದ ತೊಂದರೆ ಅನುಭವಿಸುತ್ತಿದ್ದ ಗ್ರಾಮಸ್ಥರು ಬೇಸೆತ್ತು ಗ್ರಾಮಸ್ಥರೇ ಸೇರಿ ಮಣ್ಣು ತೆರವು ಮಾಡಿದರು.



