

ಕಳಸ ಲೈವ್ ವರದಿ
ಕಳಸ ತಾಲ್ಲೂಕಿನಾಧ್ಯಂತ ಮಳೆ ಮುಂದುವರೆದಿದ್ದು ಪರಿಣಾಮ ಬಸ್ರಿಕಲ್ನಲ್ಲಿ ಪ್ರಯಾಣಿಕರ ತಂಗುದಾಣವೊಂದು ಕುಸಿದು ಬಿದ್ದಿದೆ.

ಶುಕ್ರವಾರ ರಾತ್ರಿ ಸುರಿದ ಮಳೆಗೆ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ರಿಕಲ್ ಎಂಬಲ್ಲಿ ಪ್ರಯಾಣಿಕರ ತಂಗುದಾಣ ಕುಸಿದು ಬಿದ್ದಿದೆ. ತಂಗುದಾಣದ ಒಂದು ಭಾಗ ಉಳಿದಿದ್ದು, ಪಕ್ಕದಲ್ಲಿಯೇ ಮನೆ ಇರುವುದರಿಂದ ಈ ಮನೆ ಮೇಲೆ ಬೀಳುವ ಸಂಭವವಿದ್ದು, ಕೂಡಲೇ ತೆರವು ಮಾಡಬೇಕಾಗಿದೆ.

ಕಳಸ-ಕುದುರೆಮುಖ ರಸ್ತೆಯ ಸಂಪಾನೆ ಬಳಿ ಮೋರಿಯೊಂದು ಬ್ಲಾಕ್ ಆಗಿ ರಸ್ತೆ ಪೂರ್ತಿ ನೀರು ತುಂಬಿದೆ. ರಸ್ತೆಯ ಇನ್ನೊಂದು ಭಾಗದಲ್ಲಿ ದೊಡ್ಡ ಹೊಂಡ ಇದ್ದು, ರಸ್ತೆಯಲ್ಲಿ ನೀರು ತುಂಬಿದ ಪರಿಣಾಮ ರಸ್ತೆ ಕುಸಿಯುವ ಸಾಧ್ಯತೆಯೂ ಇದೆ ಆದ್ದರಿಂದ ಇಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕಾಗಿದೆ.

