ಕಳಸ ಲೈವ್ ವರದಿ
ಹುಲ್ಲು ಕೊಯ್ಯುತ್ತಿದ್ದ ವೇಳೆ ಮರ ಬಿದ್ದು ವ್ಯಕ್ತಿಯೊಬ್ಬರು ಗಂಭೀರ ಗಾಯವಾದ ಘಟನೆ ಶನಿವಾರ ನಡೆದಿದೆ.

ಕಳಸ ತಾಲ್ಲೂಕಿನ ಸಂಪಿಗೆಖಾನ್ ನಿವಾಸಿಯಾದ ಶಂಕರೇ ಗೌಡ ಎಂಬುವವರು ಶನಿವಾರ ಸಂಜೆ ಹುಲ್ಲು ಕೊಯ್ಯುತ್ತಿದ್ದ ಸಂದರ್ಭದಲ್ಲಿ ದೊಡ್ಡ ಗಾತ್ರದ ಮರ ಶಂಕರೇ ಗೌಡರ ಮೇಲೆ ಬಿದ್ದಿದೆ. ಮರ ಬಿದ್ದು ಮರದ ಅಡಿಗೆ ಸಿಲುಕಿಕೊಂಡ ಶಂಕರೇ ಗೌಡರನ್ನು ಅಲ್ಲಿನ ಗ್ರಾಮಸ್ಥರದ ಲಕ್ಷ್ಮಣ್ ಗೌಡ ಹಾಗೂ ಸಂದೀಪ್ ಸೇರಿ ಕೂಡಲೇ ಆಂಬುಲೆನ್ಸ್ ಮುಖಾಂತರ ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಯಿತು.
ಮರ ಬಿದ್ದ ರಭಸಕ್ಕೆ ಎದೆ ಭಾಗ ಹಾಗೂ ಕಾಲಿಗೆ ಗಂಭೀರ ವಾದ ಗಾಯವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ
ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ.
