ಕಳಸ ಲೈವ್ ವರದಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಳಸ ತಾಲೂಕಿನ ಕಳಸ ವಲಯದ ಬಸ್ರಿಕಲ್ ಕಾರ್ಯಕ್ಷೇತ್ರದ ಜೋಗಿಕುಂಬ್ರಿಯಲ್ಲಿ ಗುರುವಾರ ಗ್ರಾಮದ ಯೋಜನೆಯ ಪಾಲುದಾರ ಸದಸ್ಯರುಗಳಿಗೆ ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿ ಹಣ್ಣು ಹಂಪಲು ಗಿಡ ವಿತರಣೆ ಮತ್ತು ಗಿಡ ನಾಟಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಸುರೇಶ್ ಮಾತನಾಡಿ ಪರಿಸರ ಸಂರಕ್ಷಣೆ, ಪರಿಸರ ಸ್ವಚ್ಛತೆ ಇದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಒಕ್ಕೂಟದ ಅಧ್ಯಕ್ಷ ಸುಧಾಕರ್, ಕೃಷಿ ಮೇಲ್ವಿಚಾರಕ ರವಿಚಂದ್ರ, ಕಳಸ ವಲಯದ ಮೇಲ್ವಿಚಾರಕರು ಹರೀಶ್, ಊರಿನ ಮುಖಂಡರಾದ ರಾಜಪ್ಪ ಶೌರ್ಯ ವಿಪತ್ತಿನ ಸದಸ್ಯ ಸತೀಶ್, ಸ್ಥಳೀಯ ಸೇವಾಪ್ರತಿನಿಧಿ ವಿನುತಾ, ಒಕ್ಕೂಟದ ಎಲ್ಲ ಸರ್ವ ಸದಸ್ಯರು ಇದ್ದರು.



