ಕಳಸ ಲೈವ್ ವರದಿ
ಅನರೋಗ್ಯದಿಂದ ಬಳಲುತಿದ್ದ ಹಳುವಳ್ಳಿ ಮಾಗಲು ನಿವಾಸಿ ಶ್ರೀಮತಿ ದೀಪ್ತಿ ಯವರಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರು ಇವರ ಹೆಚ್ಚಿನ ಚಿಕಿತ್ಸೆಗಾಗಿ ರೂಪಾಯಿ 45,000/- ಧನಸಹಾಯ ನೀಡಿದ್ದಾರೆ.

ಈ ಸಹಾಯ ಧನದ ಮಂಜೂರಾತಿ ಪತ್ರವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಳಸ ತಾಲೂಕಿನ ಯೋಜನಾಧಿಕಾರಿ ಸುರೇಶ್ ಕುಟುಂಬಸ್ಥರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಶುಭಕರ ಭಟ್, ವಲಯ ಮೇಲ್ವಿಚಾರಕ ಶ್ರೀನಿವಾಸ್, ಒಕ್ಕೂಟದ ಪದಾಧಿಕಾರಿ ಶ್ರೀಮತಿ ಗಿರಿಜಾ, ಅಶೋಕ್ ಭಟ್, ಸೇವಾಪ್ರತಿನಿಧಿ ಶ್ರೀಮತಿ ಸುನಿತಾ ಇದ್ದರು.


