ಕಳಸ ಲೈವ್ ವರದಿ
ಕಿಡ್ನಿ ವೈಫಲ್ಯ ದಿಂದ ಬಳಲುತ್ತಿದ್ದ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳೋಡಿ ಮಂಜುನಾಥ್ ಎಂಬುವವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 25000 ರೂಪಾಯಿಗಳನ್ನು ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ್ದಾರೆ.
ತಾಲೂಕು ಯೋಜನಾಧಿಕಾರಿ ಸುರೇಶ್ ಅವರು ಮಂಜೂರಾತಿ ಪತ್ರವನ್ನು ಕುಟುಂಬಕ್ಕೆ ವಿತರಿಸಿದರು. ಈ ಸಂದರ್ಭದಲ್ಲಿ ವಿಪತ್ತು ಘಟಕದ ಮಾಸ್ಟರ್ ಬಿ.ಕೆ ಮಹೇಶ್, ಕೃಷಿ ಮೇಲ್ವಿಚಾರಕ ರವಿಚಂದ್ರ. ವಲಯದ ಮೇಲ್ವಿಚಾರಕ ಹರೀಶ್, ಸ್ಥಳೀಯ ಸೇವಾಪ್ರತಿನಿಧಿ ವಿನುತಾ, ವಿಪತ್ತು ಸದಸ್ಯರು ಸುಧಾಕರ್, ಮಂಜುನಾಥ್ ಇದ್ದರು.
