ಕಳಸ ಲೈವ್ ವರದಿ
ತಮಿಳುನಾಡಿನ ಸಚಿವ ಉದಯನಿಧಿ ಸ್ಪಾಲಿನ್ ಸನಾತನ ಹಿಂದೂ ಧರ್ಮದ ಬಗ್ಗೆ ದ್ವೇಷಪೂರಿತ ಬೆದರಿಕೆಯೊಡ್ಡುವ ಇತ್ಯಾದಿ ಭಾಷಣದ ವಿರುದ್ದ ಕ್ರಮ ಜರುಗಿಸಲು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಳಸ ಪ್ರಖಂಡದಿಂದ ಕಳಸ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಭಾರತೀಯ ಸಂವಿದಾನದಂತೆ ಪ್ರತಿಜ್ಞಾ ವಿಧಿಯನ್ನು ತಮಿಳುನಾಡು ಸರ್ಕಾರದ ಮಂತ್ರಿಯಾಗಿ ಸ್ವೀಕರಿಸಿದ ಉದಯನಿಧಿ ಸ್ಪಾಲಿನ್ ರವರು ಸನಾತನ ಅಬಾಲಿಷನ್ ಕಾನ್ಫರೆನ್ಸ್ ಸಭೆಯಲ್ಲಿ ಸನಾತನ ಹಿಂದೂ ಧರ್ಮವನ್ನು ಮೂಲೋಚ್ಛಾಟನೆ ಮಾಡುವಂತೆಯೂ ಹಿಂದೂ ಧರ್ಮವನ್ನು ಸೊಳ್ಳೆ, ಮಲೇರಿಯಾ, ಡೆಂಗ್ಯೂವಿನಂತಹ ಖಾಯಿಲೆಗೆ ಹೋಲಿಸಿ ಭಾಷಣ ಮಾಡಿದ್ದಾರೆ.ಇದು ಹಿಂದೂಗಳ ಭಾವನೆಯನ್ನು ಧಾರ್ಮಿಕತೆಯನ್ನು ಉದ್ದೇಶಪೂರ್ವಕವಾಗಿ ಘಾಸಿಗೊಳಿಸಿರುತ್ತಾರೆ.ಹಿಂದೂ ಸಮಾಜದ ವಿರುದ್ಧ ದ್ವೇಷಮಯ ವಾತಾವರಣ ನಿರ್ಮಾಣ ಮಾಡುವ ಬಾಷಣ ಮಾಡಿ ಸಮಾಜದ ಸಾಮರಸ್ಯ ಕದಡಿ ಸಮಾಜದ ನಡುವೆ ಸಂಘರ್ಷ ಹರಡಿದ್ದಾರೆ.ಆದ್ದರಿಂದ ಉದಯನಿಧಿ ಸ್ಟಾಲಿನ್ ರವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಂಯೋಜಕ ಅಜಿತ್ ಕುಲಾಲ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪ್ರಭು, ತಾಲ್ಲೂಕು ಗೋ ರಕ್ಷಕ ವಿಜಯ ಸೂರ್ಯ, ಮುಖಂಡರಾದ ನಾಗಭೂಷಣ, ಸಂತೋಷ ಇತರರು ಇದ್ದರು.

