ಕಳಸ ಲೈವ್ ವರದಿ
ಕಳಸ ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿ ವತಿಯಿಂದ ಮಂಗಳವಾರ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪ್ರಬೋಧಿನಿ ವಿದ್ಯಾ ಕೇಂದ್ರ ಆಡಳಿತ ಸಮಿತಿ ಸದಸ್ಯೆ ವೀಣಾ ರಾಘವೇಂದ್ರ ಮಂಡಳಿಯ ಅಧ್ಯಕ್ಷೆ ಸುಜಯಾ ಸದಾನಂದರವರಿಗೆ ರಕ್ಷೆಯನ್ನು ಕಟ್ಟುವುದರ ಮುಖಾಂತರ ರಕ್ಷಾಬಂಧನ ಕಾರ್ಯಕ್ರಮವನ್ನು ನಡೆಸಿ ನಂತರ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಶಿಕ್ಷಕರ ದಿನಾಚರಣೆಯಲ್ಲಿ ನಿವೃತ ಶಿಕ್ಷಕರಾದ ಭಾಸ್ಕರ ಡೋಂಗ್ರೆ ಇವರನ್ನು ಸನ್ಮಾನಿಸುವುದರ ಜೊತೆ 40ಕ್ಕೂ ಹೆಚ್ಚು ಕಳಸದ ವಿವಿಧ ಶಾಲೆ ಮತ್ತು ಅಂಗನವಾಡಿಗಳ ಶಿಕ್ಷಕರನ್ನು ಗೌರವಿಸಲಾಯಿತು.

ಪ್ರತಿಯೊಬ್ಬ ಶಿಕ್ಷಕ ಕೂಡ ದೀಪವನ್ನು ಹಚ್ಚುವುದರ ಮುಖಾಂತರ ಜ್ಞಾನದ ದೀಪವನ್ನು ಬೆಳಗಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಶಿಕ್ಷಕರಿಗೆ ಕೆಲ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವನ್ನು ನೀಡಲಾಯಿತು.

ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಮಂಡಳಿಯ ಸದಸ್ಯೆಯರಾದ ಆಶಾ ರಾಘವೇಂದ್ರ, ಕಲ್ಪನಾ ಅಜಿತ್, ಜಮಿಲ ರಫೀಕ್, ಕಿರಣ ಬ್ರಹ್ಮದೇವ ವಹಿಸಿದ್ದರು.

ಮಂಡಳಿಯ ಅಧ್ಯಕ್ಷೆ ಸುಜಯ ಸದಾನಂದ, ಕೆಪಿಎಸ್ ಪಿಯು ಕಾಲೇಜು ಪ್ರಾಂಶುಪಾಲ ಅನಂತ ಪದ್ಮನಾಭ, ಹಿರಿಯ ನಿವೃತ ಶಿಕ್ಷಕಿ ಐರಿನ್ ಡಿಸೋಜಾ, ಪ್ರಬೋಧಿನಿ ವಿದ್ಯಾ ಕೇಂದ್ರ ಆಡಳಿತ ಮಂಡಳಿ ಸದಸ್ಯೆ ವೀಣಾ ರಾಘವೇಂದ್ರ ಇದ್ದರು.



