ಕಳಸ ಲೈವ್ ವರದಿ
ಹೊರನಾಡು ರಸ್ತೆಯ ಭದ್ರಾ ನದಿಯ ಹೆಬ್ಬೊಳೆಯಲ್ಲಿ ತೋಟ ಕಾರ್ಮಿಕರೊಬ್ಬರು ಮುಳುಗಿದ್ದಾರೆ ಎಂಬ ಶಂಕೆಯಲ್ಲಿ ಮೃತದೇಹಕ್ಕಾಗಿ ಕಳೆದ ನಾಲ್ಕು ದಿನಗಳಿಂದ ಹುಡುಕಾಡಿದರೂ ಕೂಡ ಮೃತ ದೇಹ ಪತ್ತೆಯಾಗಲಿಲ್ಲ.

ಹೆಬ್ಬೊಳೆ ಸಮೀಪದ ತೋಟವೊಂದಕ್ಕೆ 2 ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೊಬ್ಬರು ಕೆಲಸಕ್ಕೆ ಬಂದಿದ್ದರು. ಭದ್ರಾ ನದಿಯಲ್ಲಿ ಅವರು ಸೆ 16ರಂದು ಬೆಳಿಗ್ಗೆ ಮುಳುಗಿದ್ದನ್ನು ಅಲ್ಲೇ ಇದ್ದ ಸ್ಥಳೀಯರು ನೋಡಿ, ಕಳಸ ಪೊಲೀಸರಿಗೆ ತಿಳಿಸಿದ ಹಿನ್ನಲೆಯಲ್ಲಿ ನದಿಯಲ್ಲಿ ಮುಳುಗಿದ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಕಳೆದ ನಾಲ್ಕು ದಿನಗಳಿಂದ ಅಗ್ನಿಶಾಮಕ ಸಿಬ್ಬಂದಿಗಳು ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಕಳಸ ಪೊಲೀಸರು ಹುಡುಕಾಟ ನಡೆಸಿದರೂ ಕೂಡ ಯಾವುದೇ ಪ್ರಯೋಜನ ಆಗಲಿಲ್ಲ.
ಮಂಗಳವಾರ ಮುಳುಗು ತಜ್ಞ ಮಲ್ಪೆ ಈಶ್ವರ್ ಬಂದು ಸಂಜೆಯವರೆಗೆ ನದಿಯಲ್ಲಿ ಹುಡುಕಾಟ ನಡೆಸಿದರೂ ಕೂಡ ಯಾವುದೇ ಫಲ ನೀಡಲಿಲ್ಲ.


