







ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಶ್ರೀ ಬಾಲಗಣಪತಿ ಸೇವಾ ಸಮಿತಿ ಮತ್ತು ಆದರ್ಶ ಯುವಕ ಸಂಘದ ವತಿಯಿಂದ ನಡೆದ 41ನೇ ಶ್ರೀ ಬಾಲಗಣಪತಿ ಪೂಜಾ ಮಹೋತ್ಸವದಲ್ಲಿ ಗುರುವಾರ ನಡೆದ ನೃತ್ಯ ಸ್ಪರ್ಧೆಯು ನೃತ್ಯ ಪ್ರೀಯರಿಗೆ ರಸದೌತನ ನೀಡಿತು.
ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿದೆಡೆಯಿಂದ ಹದಿನೈದು ಹೆಚ್ಚು ನೃತ್ಯ ತಂಡಗಳು ಬಾಗವಸಿದ್ದವು.ಸೋಲೋ, ಗ್ರೂಫ್ ಹಾಗೂ ಪುನೀತ್ ರಾಜ್ ಕುಮಾರ್ ಹಿಟ್ಸ್ ಎಂಬ ಮೂರು ವಿಭಾಗದಲ್ಲಿ ಸ್ಪರ್ಧೆಯನ್ನು ನಡೆಸಲಾಗಿತ್ತು. ಒಂದಕ್ಕಿಂತ ಒಂದು ಮೀರಿಸುವಂತ ನೃತ್ಯಗಳಿಂದ ತೀರ್ಪುಗಾರರಿಗೆ ವಿಜೇತರನ್ನು ಆಯ್ಕೆ ಮಾಡುವುದೇ ದೊಡ್ಡ ಸವಾಲಾಗಿತ್ತು. ಟೀವಿ ಚಾನಲ್ ಗಳಲ್ಲಿ ನಡೆಯುವಂತ ರಿಯಾಲಿಟೀ ಶೋಗಳನ್ನು ಮೀರಿಸುವಂತ ನೃತ್ಯಗಳು ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ನೃತ್ಯ ಪ್ರೀಯರಿಗೆ ಗಣೇಶ ಹಬ್ಬದಲ್ಲಿ ಹಬ್ಬದೂಟವನ್ನು ಸವಿದಂತಾಗಿತ್ತು.
ಅಂತಿಮವಾಗಿ ಗ್ರೂಫ್ ಡ್ಯಾನ್ಸ್ ವಿಭಾಗದಲ್ಲಿ ಡಸ್ಟಿನಿ ಡ್ಯಾನ್ಸ್ ಸ್ಕೂಲ್ ಕೊಪ್ಪ(ಪ್ರ), ಆರ್ಯಶಿವ ಸ್ಕೂಲ್ ಚಿಕ್ಕಮಗಳೂರು(ದ್ವಿ), ಈಗಲ್ ಐಸ್ ಕಳಸ(ತೃ).
ಪುನೀತ್ ರಾಜ್ ಹಿಟ್ಸ್ ವಿಭಾಗದಲ್ಲಿ ಸಾಂಗ್ಸ್ ಡ್ಯಾನ್ಸ್ ಸ್ಕೂಲ್ ಚಿಕ್ಕಮಗಳೂರು(ಪ್ರ), ನಿತ್ಯಾ ಕಲಾ ಕ್ಷೇತ್ರ ಮೂಡಿಗೆರೆ(ದ್ವಿ), ಪವರ್ ಡ್ಯಾನ್ಸ್ ಸ್ಕೂಲ್ ಹಳೇಬೀಡು(ತೃ).
ಸೋಲೋ ವಿಭಾಗದಲ್ಲಿ ಡಸ್ಟಿನಿ ಡ್ಯಾನ್ಸ್ ಸ್ಕೂಲ್ (ಪ್ರ), ಪವರ್ ಡ್ಯಾನ್ಸ್ ಸ್ಕೂಲ್ ಹಳೇಬೀಡು(ದ್ವಿ), ಪವರ್ ಡ್ಯಾನ್ಸ್ ಸ್ಕೂಲ್ ಹಳೇಬೀಡು(ತೃ) ಸ್ಥಾನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ವಸಂತ, ಗೌರವಾಧ್ಯಕ್ಷ ವೆಂಕಟೇಶ್, ಕಾರ್ಯಾಧ್ಯಕ್ಷ ಕಿಶೋರ್ ಭಂಡಾರಿ, ರತ್ನಾಕರ ಪೂಜಾರಿ,ಕಾರ್ಯದರ್ಶಿ ಅಜಿತ್, ರವಿ ರಾವ್, ಹರಿದಾಸ್ಕಿರಣ್ ಮೋನಿಸ್, ಅಜಯ್, ಗಜೇಂದ್ರ,ಚೇತನ್, ಈಶ್ವರ, ಅಜಯ್ ಎಸ್, ಪ್ರವೀಣ, ಕೌಶಿಕ್, ಪ್ರಸನ್ನ, ಕೀರ್ತನ್, ಮಂಜುನಾಥ, ಶ್ರೀನಿವಾಸ ಇತರರು ಇದ್ದರು.



