

ಕಳಸ ಲೈವ್ ವರದಿ
ತಾಲ್ಲೂಕಿನ ಶ್ರೀ ವಿದ್ಯಾಗಣಪತಿ ಯುವಕ ಸಂಘ ಬಸ್ರಿಕಲ್, ಬೆಳ್ಳ ಇವರ ವತಿಯಿಂದ ನಡೆಯುವ 34ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು.
ಇಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಮೂರು ದಿನ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ, ರಸಮಂಜರಿ ಹಾಗೂ ಕ್ರೀಡೆಗಳನ್ನು ನಡೆಸಲಾಯಿತು.
ಗುರುವಾರ ಸ್ವಾಮಿಯ ವೈಭವಯುತ ಮೆರವಣಿಗೆಯು ಮಂಗಳವಾದ್ಯಗಳೊಂದಿಗೆ ಬಸ್ರಿಕಲ್ ಮೂಲಕ ಸಾಗಿ ಹೊಸಮಠ ಸೋಮಾವತಿ ನದಿಯಲ್ಲಿ ವಿಸರ್ಜಿಸಲಾಯಿತು.
ಮೆರವಣಿಗೆಯುದ್ದಕ್ಕೂ ಬಸ್ರಿಕಲ್ ಮತ್ತು ಜೋಗಿಕುಂಬ್ರಿ ಯುವಕರ ನಾಸಿಕ್ ಡೋಲ್ ನ ಬಡಿತಕ್ಕೆ ಯವಕರ ಕುಣಿತ ಮೆರವಣಿಗೆಗೆ ಮೆರುಗು ನೀಡಿತು.
