ಕಳಸ ವೈವ್ ವರದಿ
ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇದೇ ತಿಂಗಳ 29ರಂದು ಆಯುಷ್ಮಾನ್ ಭವ ಯೋಜನೆಯಡಿಯಲ್ಲಿ ಉಚಿತ ಆರೋಗ್ಯ ಮೇಳ ನಡೆಯಲಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ತಾಲ್ಲೂಕು ವೈದ್ಯಾಧಿಕಾರಿಗಳು ಮೂಡಿಗೆರೆ ಮತ್ತು ಕಳಸ ಸಮುದಾಯ ಕೇಂದ್ರ ಸಂಯುಕ್ತಾಶ್ರಯದಲ್ಲಿ ಈ ಆರೋಗ್ಯ ಮೇಳ ನಡೆಯಲಿದ್ದು, ಈ ಮೇಳದಲ್ಲಿ ಮಕ್ಕಳ ತಜ್ಞರು, ಪ್ರಸೂತಿ ತಜ್ಞರು, ಕಿವಿ, ಮೂಗು, ಗಂಟಲು, ಹಾಗೂ ಫಿಜೀಷಿಯನ್ ತಜ್ಞ ವೈದ್ಯರುಗಳು ಆಗಮಿಸಿ ಉಚಿತವಾದ ತಪಾಸಣೆ ಮಾಡಲಿದ್ದಾರೆ.ಅಲ್ಲದೆ ಅಂಗಾಂಗ ದಾನ ಮತ್ತು ಆಬಾ ಕಾರ್ಡ್ಗಳನ್ನು ಕೂಡ ಮಾಡಲಾಗುತ್ತದೆ.
ತಪಾಸಣೆ ಮಾಡಲು ಬರುವವರು ಆದಾರ್ ಕಾರ್ಡ್, ಪಡಿತರ ಚೀಟಿ ಮತ್ತು ಮೊಬೈಲ್ ಸಂಖ್ಯೆಯನ್ನು ತರಬೇಕು.
ಇದರ ಉಪಯೋಗವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಕಳಸ ಸಮುದಾಯ ಆರೋಗ್ಯ ಕೇಂದ್ರ ಆಡಳಿತಾಧಿಕಾರಿ ಡಾ| ಮಧುಸೂದನ್ ತಿಳಿಸಿದ್ದಾರೆ.



