
ಕಳಸ ಲೈವ್ ವರದಿ
ಬಾಳೆಹೊನ್ನೂರು 66/33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ 2023-24 ನೇ ಸಾಲಿನ ಎರಡನೇ ತ್ರೈ ಮಾಸಿಕ ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ 30-09-2023 ರ ಶನಿವಾರ ಬೆಳಿಗ್ಗೆ 09:00 ರಿಂದ ಸಂಜೆ 06:00 ಗಂಟೆಯವರೆಗೆ ಕಳಸ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಕಳಸ, ಹೊರನಾಡು, ಬಾಳೆಹೊಳೆ, ಸಂಸೆ, ಸುಂಕಸಾಲೆ, ಕುದುರೆಮುಖ, ಹಿರೇಬೈಲ್, ಮರಸಣಿಗೆ ಭಾಗಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.