
ಕಳಸ ಲೈವ್ ವರದಿ
ಕಳಸ ಜುಮ್ಮಾ ಮಸೀದಿ ಹಾಗೂ ಇರ್ಷಾದುಲ್ ಮುಸ್ಲಿಮೀನ್ ಯೂತ್ ಕಮಿಟಿಯ ಸಂಯುಕ್ತ ಆಶ್ರಯದಲ್ಲಿ 1498ನೇ ಈದ್ ಮೀಲಾದ್ ಪ್ರಯುಕ್ತ ಜಲ್ಸತುಲ್ ಮಹಬ್ಬ ಹಾಗೂ ವಾರ್ಷಿಕ ಸ್ವಲಾತ್ ಕಾರ್ಯಕ್ರಮ ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿತು.
ಕಳೆದ ಎರಡು ದಿನಗಳಿಂದ ಜುಮ್ಮಾ ಮಸೀದಿಯ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಕಳಸ ನೂರುಲ್ ಇಸ್ಲಾಂ ಮದರಸದ ಹಝ್ರತ್ ಸೈಯದ್ ಸುಹೈಲ್ ಹಝ್ರತ್ ಉದ್ಘಾಟಿಸಿದರು.ಮೂರು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಮಸೀದಿಗಳ ಧರ್ಮಗುರುಗಳಾದ ಅಹ್ಮದ್ ನಹೀಂ ಪೈಝಿ ಮ’ಅಬರಿ ಮುಕ್ವೆ,ಅಲ್ತಾಫ್ ಸಖಾಫಿ ಅಲ್ ಮುಈನಿ ವಿವಿಧ ವಿಷಯಗಳ ಕುರಿತು ಧಾರ್ಮಿಕ ಪ್ರವಚನವನ್ನು ನೀಡಿದರು.
ಕಾರ್ಯಕ್ರಮಗಳ ಮೂರನೇ ದಿನ ಗುರುವಾರ ಬೆಳಿಗ್ಗೆ ಬೃಹತ್ ಮಿಲಾದ್ ಮೆರವಣಿಗೆ ನಡೆಯಿತು.ಮೆರವಣಿಗೆಯು ನೂರಾರು ಜನ ಮುಸ್ಲೀಂ ಬಾಂದವರೊಂದಿಗೆ ಕಳಸ ಮುಖ್ಯ ರಸ್ತೆಯಲ್ಲಿ ಸಾಗಿ,ಮಹಾವೀರ ವೃತ್ತ,ಮಹಾವೀರ ರಸ್ತೆ ಮುಖಾಂತರ ಜುಮ್ಮಾ ಮಸೀದಿಯಲ್ಲಿ ಕೊನೆಗೊಂಡಿತು.ಮೆರವಣಗೆಯಲ್ಲಿ ತಂಪು ಪಾನೀಯ ವ್ಯವಸ್ಥೆಯನ್ನು ಹಿಂದೂ ಬಾಂದವರು ನಡೆಸಿಕೊಟ್ಟು ಸೌಹಾರ್ದತೆಯನ್ನು ಮೆರೆದರು. ಮೆರವಣಿಗೆಯುದ್ದಕ್ಕೂ ಮಕ್ಕಳ ದಫ್ ಪ್ರದರ್ಶನ ಮೆರವಣಿಗೆಗೆ ಮೆರುಗು ನೀಡಿತ್ತು. ನಂತರ ಮದ್ರಸದ ಮಕ್ಕಳಿಂದ ಕಾರ್ಯಕ್ರಮ ಪ್ರಶಸ್ತಿ ಪತ್ರ,ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಕಳಸ ಮಸೀದಿಯ ಖತೀಬರಾದ ಸೈಯದ್ ಝೈನಲ್ ಆಬಿದೀನ್ ಸಅದಿ ಅಲ್ಹಾದಿ, ಅಸ್ಸಯ್ಯದ್ ಇಬ್ನು ಮೌಲಾನ ತಂಙಳ್, ಉಸ್ಮಾನ್ ಸಅದಿ, ಅಬ್ದುಲ್ ರೆಹಮಾನ್ ಫಾಳಿಲಿ, ಮಸೀದಿ ಅಧ್ಯಕ್ಷರಾದ ಹಾಜಿ.ಪಿ.ಎಂ.ಅಬ್ದುಲ್ ಖಾದರ್,ಕಾರ್ಯದರ್ಶಿ ಅಬ್ದುಲ್ ಅಜೀಜ್, ಇರ್ಷಾದುಲ್ ಮುಸ್ಲಿಮೀನ್ ಯೂತ್ ಕಮೀಟಿ ಅಧ್ಯಕ್ಷ ಕೆ.ಎ.ಇಕ್ಬಾಲ್ ಹಾಗೂ ಸರ್ವ ಸದಸ್ಯರು ಇದ್ದರು.