ಕಳಸ ಲೈವ್ ವರದಿ
ಕಳಸ ಹೆಬ್ಬಾಳೆ ಭದ್ರಾ ನದಿಯಲ್ಲಿ ವ್ಯಕ್ತಿಯೊಬ್ಬರು ಈಜಾಡಲು ಹೋಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮೃತಪಟ್ಟ ವ್ಯಕ್ತಿ ಬೆಂಗಳೂರು ಶ್ರೀನಗರದ ಗೋಕುಲ್( 25) ಎಂದು ಗುರುತಿಸಲಾಗಿದೆ.
ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಬೆಂಗಳೂರಿನಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಬಂದು ಮಂಗಳವಾರ ಮರಳಿ ಬೆಂಗಳೂರು ಹೋಗುವ ಸಂದರ್ಭದಲ್ಲಿ ಕಳಸ-ಹೊರನಾಡು ರಸ್ತೆ ಮಧ್ಯೆ ಸಿಗುವ ಹೆಬ್ಬಾಳೆಯ ಭದ್ರಾ ನದಿಯಲ್ಲಿ ಸ್ನಾನಕ್ಕಿಳಿದು ಈಜಾಡಲು ಹೋಗಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನೀರಿನಲ್ಲಿ ತೇಳಿ ಬರುತ್ತಿರುವ ವ್ಯಕ್ತಿಯನ್ನು ಹೆಬ್ಬಾಳೆಯ ಹೊಸ ಸೇತುವೆಯ ಕೆಲಸ ಮಾಡುತ್ತಿದ್ದ ಕಾರ್ಮಿಕರು ನೋಡಿ ಕೂಡಲೇ ನೀರಿನಿಂದ ಮೇಲಕ್ಕೆತ್ತಿದ್ದಾರೆ.ಆದರೆ ಆ ಸಂದರ್ಭದಲ್ಲಿ ವ್ಯಕ್ತಿ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಮೃತ ದೇಹವನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇಡಲಾಗಿದೆ.
