

ಕಳಸ ಲೈವ್ ವರದಿ
ತಾಲೂಕಿನ ಮಾವಿನಕೆರೆ ಎಸ್ಟೇಟ್ ನಲ್ಲಿ ದೀಪಾವಳಿ ಪ್ರಯುಕ್ತ ವಲಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಗ್ರಾಮದ ಹಲವು ಕ್ರೀಡಾಪಟುಗಳು ಭಾಗಿಯಾಗಿ ಕಬ್ಬಡಿ ವಾಲಿಬಾಲ್ ಹಗ್ಗಜಗ್ಗಾಟ ದಲ್ಲಿ ಪಾಲ್ಗೊಂಡು ಅತ್ಯುತ್ತಮ ಕ್ರೀಡಾ ಚಾಕಚಕ್ಯತೆಯನ್ನು ತೋರ್ಪಡಿಸಿದರು. ಜಯಶಾಲಿ ಕ್ರೀಡಾಪಟುಗಳಿಗೆ ಪಾರಿತೋಷಕ ಹಾಗೂ ನಗದು ಬಹುಮಾನದೊಂದಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸುಧಾಕರ್.ರವೀಂದ್ರ ಭಟ್, ಸಿಬ್ಬಂದಿಗಳು ಹಾಗೂ ಕಾರ್ಮಿಕರು ಹಾಜರಿದ್ದರು.
