

ಕಳಸ ಲೈವ್ ವರದಿ
17ರ ವಯೋಮಿತಿಯ ಚಿಕ್ಕಮಗಳೂರು ಜಿಲ್ಲೆಯ ಪ್ರೌಢಶಾಲೆಗಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕಳಸ ಜೆಇಎಂ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶನಿವಾರ ಅಜ್ಜಂಪುರದ ಸರ್ಕಾರಿ ಪ್ರೌಢಶಾಲೆ ಸೊಕ್ಕೆಯಲ್ಲಿ ನಡೆದಿದ್ದು ಈ ಕ್ರೀಡಾಕೂಟ ದಲ್ಲಿ ಕಳಸ ಜೆಇಎಮ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 5000ಮೀ ನಡಿಗೆ ಸ್ಪರ್ಧೆಯಲ್ಲಿ 10ನೇ ತರಗತಿಯ ಸಮೃದ್ ಹೆಚ್ ಎನ್ ಪ್ರಥಮ ಸ್ಥಾನ, ಹಾಗೂ 3000ಮೀ ನಡಿಗೆ ಸ್ಪರ್ಧೆಯಲ್ಲಿ 8ನೇ ತರಗತಿಯ ವಿದುμÁ ಜೈನ್ ದ್ವಿತೀಯ ಸ್ಥಾನ ಹಾಗೂ ಬಾಲಕರ ವಿಭಾಗದ 4*100 ರಿಲೆ ಓಟದ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಸುಜಿತ್ ಶೆಟ್ಟಿ, ಶಮಂತ್, ಧನುμï ಜೈನ್ ಮತ್ತು ಅಕ್ಷಯ್ ಜೈನ್ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾದರು. ಹಾಗೂ 800ಮೀ ಓಟದ ಸ್ಪರ್ಧೆಯಲ್ಲಿ ಮಾನ್ವಿ ಶೆಟ್ಟಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಶಾಲೆಯ ಶಿಕ್ಷ ಪ್ರಶಾಂತ್ ಹೆಚ್.ಆರ್ ಮಾಹಿತಿ ನೀಡಿದ್ದಾರೆ.
