ಕಳಸ ಲೈವ್ ವರದಿ
ದಕ್ಷಿಣ ಕಾಶಿ ಅಗಸ್ತ್ಯ ಕ್ಷೇತ್ರ ಶ್ರೀ ಕಲಶೇಶ್ವರ ಸ್ವಾಮಿಯವರಿಗೆ ನವಂಬರ್ 23 ರಂದು ಗಿರಿಜಾಕಲ್ಯಾಣೋತ್ಸವ ನಡೆಯಲಿದ್ದು, ನವಂಬರ್ 20 ರಿಂದ ಪೂಜಾ ವಿಧಿ ವಿಧಾನಗಳು ನಡೆದು ನವಂಬರ್ 27 ರಂದು ಕೊನೆಗೊಳ್ಳಲಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಸ್.ಪ್ರೇಮಲತಾ ತಿಳಿಸಿದ್ದಾರೆ.
ನ 20 ರಂದು ಗಣಪತಿ ಪೂಜೆ ಅಂಕುರಾರ್ಪಣೆ, ನ 21 ರಂದು ಕೌತುಕೋತ್ಸವ, ನ 22 ರಂದು ಧ್ವಜಾರೋಹಣ, ಗ್ರಾಮಸ್ಥರಿಂದ ಹಸಿರುವಾಣಿ ಸಮರ್ಪಣೆ, ಕಾರ್ತಿಕ ದೀಪೋತ್ಸವ, ಸುಪ್ರದಕ್ಷಿಣೆ ಸೇವೆ.
ನ 23 ರಂದು ಶತವಾರ ರುದ್ರಾಭಿಷೇಕ, ರಂಗಪೂಜೆ, ರಾತ್ರಿ 3 ಗಂಟೆಗೆ ಗಿರಿಜಾ ಕಲ್ಯಾಣೋತ್ಸವ, ನ 24 ರಂದು ಮಹಾಪೂಜೆ, ರಾತ್ರಿ ಚಿಕ್ಕ ರಥೋತ್ಸವ.ನ 25 ರಂದು ಬಿಂದು ಮಾಧವ ದೇವರ ಆಗಮನ, ರಾತ್ರಿ ಡೋಲೋತ್ಸವ, ಬಿಂದು ಮಾಧವ ದೇವರ ಸಮಾಗಮ.
ನ 26 ರಂದು ಕುಂಕುಮೋತ್ಸವ, ರುದ್ರತೀರ್ಥದಲ್ಲಿ ಅವಭೃತ ಸ್ನಾನ, ರಾತ್ರಿ ದ್ವಜಾವರೋಹಣ, ನ 27 ರಂದು ಮಹಾ ಸಂಪ್ರೋಕ್ಷಣೆ, ವಶಿಷ್ಟಾಶ್ರಮದಲ್ಲಿ ಧಾತ್ರಿ ಹೋಮ, ಸಂತರ್ಪಣೆ ರಾತ್ರಿ ತ್ರಿಪುರೋತ್ಸವ, ಕೃತಿಕಾ ದೀಪೋತ್ಸವ ಹರಿಹರ ಸಮಾಗಮದೊಂದಿಗೆ 8 ದಿನಗಳ ಕಾಲ ನಡೆಯುವ ಗಿರಿಜಾಕಲ್ಯಾಣ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಕ್ಕೆ ತೆರೆಬೀಳಲಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.