ಕಳಸ ಲೈವ್ ವರದಿ
ಸಂಸೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರವಿಕುಮಾರ್ ಕಳಕೋಡು ಇವರು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ಭಾಜಪಾ,ಕಳಸ ಮಹಾಶಕ್ತಿ ಕೇಂದ್ರದ ಕಾರ್ಯಾಲಯದಲ್ಲಿ ಸೋಮವಾರ ನಡೆದ ಪಕ್ಷದ ಸಭೆಯಲ್ಲಿ ಸೇರ್ಪಡೆಗೊಂಡಿದ್ದು, ಇವರೊಂದಿಗೆ ಸಂಸೆ ಗ್ರಾ.ಪಂ. ಸದಸ್ಯೆ ಶ್ರೀಮತಿ ಪೂರ್ಣಿಮಾ,ಕಳಕೋಡು ರತ್ನಾಕರ್ ಕೆ.ಆರ್. ಇವರುಗಳೂ ಸಹ ಬಿಜೆಪಿಗೆ ಸೇರ್ಪಡೆಗೊಂಡರು.
ರವಿ ಕಳಕೋಡು 2008 ರಿಂದ ಜೆಡಿಎಸ್ನಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು 2 ಬಾರಿ ಪಂಚಾಯಿತಿ ಸದಸ್ಯರಾಗಿ ಒಂದು ಬಾರಿ ಪಂಚಾಯಿತಿ ಅಧ್ಯಕ್ಷರು ಕೂಡ ಆಗಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ನಾಗಭೂಷಣ.ಎಸ್.ಜೆ., ಮಂಡಲದ ಸಹಪ್ರಭಾರಿಯಾದ ಎಂ.ಎ ಶೇಷಗಿರಿ, ಯುವಮೋರ್ಚಾ ಅಧ್ಯಕ್ಷ ಮಹೇಶ್ ಬಸ್ರಿಕಲ್, ಸಂಸೆ ಗ್ರಾ.ಪಂ. ಸದಸ್ಯ ಶ್ರೀ ಉದಯ್, ಪಕ್ಷದ ಕಾರ್ಯಕರ್ತರಾದ ಶ್ರೀ ಕಿಶೋರ್ ಹಾಜರಿದ್ದರು.