ಕಳಸ ಲೈವ್ ವರದಿ
ಬಾಳೆಹೊಳೆ ಸಮೀಪದ ಕಾರಕ್ಕಿ ಪ್ರದೇಶದ ಕೃಷಿಕ ಸುಧಾಕರ (50) ಕಳೆದ 15 ದಿನಗಳಿಂದ ನಾಪತ್ತೆ ಆಗಿದ್ದಾರೆ.
ನವೆಂಬರ್ 29ರಂದು ಮನೆಯಿಂದ ಹೋದ ಅವರು ಈವರೆಗೂ ಮರಳಿಲ್ಲ ಎಂದು ಅವರ ಪತ್ನಿ ಜಯಲಕ್ಷ್ಮಿ ಕಳಸ ಪೆÇಲೀಸರಿಗೆ ದೂರು ನೀಡಿದ್ದಾರೆ.
ಐದೂವರೆ ಅಡಿ ಎತ್ತರದ ಅವರು ಎಣ್ಣೆಗೆಂಪು ಮೈಬಣ್ಣ ಮತ್ತು ಕಪ್ಪು ತಲೆಕೂದಲು ಹೊಂದಿದ್ದಾರೆ.ಕನ್ನಡ, ತುಳು ಮಾತನಾಡುತ್ತಾರೆ.ಮಾಹಿತಿ ಇದ್ದವರು ಕಳಸ ಪೆÇಲೀಸ್ ಠಾಣೆ ಸಂಪರ್ಕಿಸಬೇಕು ಎಂದು ಠಾಣಾಧಿಕಾರಿ ನಿತ್ಯಾನಂದ ಗೌಡ ಕೋರಿದ್ದಾರೆ.
