
ಕಳಸ ಲೈವ್ ವರದಿ
ಲೋಕಸಭೆಯಲ್ಲಿ ಏಕಕಾಲಿಕ ವ್ಯಾಖ್ಯಾನ ಕಾರ (ಕನ್ಸಲೈಂಟ್ ಇಂಟರ್ ಪ್ರಿಟರ್) ಹುದ್ದೆಗೆ ಪತ್ರಕರ್ತೆ ಸುಪ್ರೀತಾ ಹೆಬ್ಬಾರ್ ನೇಮಕ ಗೊಂಡಿದ್ದಾರೆ.
ಸುಮಾರು 15 ವರ್ಷ ಪತ್ರಕರ್ತೆಯಾಗಿ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ದೆಹಲಿಯಲ್ಲಿ ನೆಲೆಸಿರುವ ಸುಪ್ರೀತಾ, ಸಂಸತ್ತಿನ ಲೋಕಸಭಾ ಅಧಿವೇಶನದ ಕಲಾಪಗಳನ್ನು ಆಂಗ್ಲ ಮತ್ತು ಹಿಂದಿ ಭಾಷೆಯಿಂದ ಕನ್ನಡ ಭಾಷೆಗೆ ಏಕಕಾಲಕ್ಕೆ ವ್ಯಾಖ್ಯಾನಿಸುವ ಇಂಟರ್ ಪ್ರೀಟರ್ ಆಗಿ ನೇಮಕಗೊಂಡಿದ್ದಾರೆ.
ಕಳಸ ತಾಲ್ಲೂಕಿನ ಮುನ್ನೂರುಪಾಲ್ ಗ್ರಾಮದ ಎಚ್.ಎಸ್. ಕೃಷ್ಣಮೂರ್ತಿ ಹಾಗೂ ಗುಣವತಿ ಅವರ ಪುತ್ರಿಯಾದ ಇವರು ಕಳಸದ ಜೆಇಎಂ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು.

ಪ್ರಸ್ತುತ ‘ಡ್ರೈವ್ ದಿ ಫೇಮ್’ ಎಂಬ ಹೆಸರಿನ ಆಟೊಮೊಬೈಲ್ ಯೂಟ್ಯೂಬ್ ಚಾನೆಲ್ ಎಂಬ ಚಾನೆಲ್ ಹಾಗೂ ಸೌತ್ ಗರ್ಲ್ ಇನ್ ನಾರ್ತ್ ಮುನ್ನಡೆಸುತ್ತಿದ್ದಾರೆ.ಇದು ಮಹಿಳಾ ಪತ್ರಕರ್ತೆಯರು ನಡೆಸುತ್ತಿರುವ ಕನ್ನಡದ ಮೊದಲ ಆಟೋ ಮೋಬೈಲ್ ಚಾನಲ್. ಕಾನೂನು, ರಕ್ಷಣಾ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ವರದಿಗಾರಿಕೆಯಲ್ಲಿ ದಶಕಗಳ ಅನುಭವದ ನಂತರ ಇವರು ಅಟೋಮೋಬೈಲ್ ಕ್ಷೇತ್ರವನ್ನು ಆರಿಸಿಕೊಂಡಿದ್ದರು.ಹೊಸದಾಗಿ ಬಿಡುಗಡೆಗೊಂಡ ಕಾರು ಹಾಗೂ ಬೈಕ್ಗಳ ವಿವರಗಳನ್ನು ಕನ್ನಡದಲ್ಲಿ ನೀಡುತ್ತಿದ್ದಾರೆ.
ಈಗ ಲೋಕಸಭೆಯಲ್ಲಿ ಏಕಕಾಲಿಕ ವ್ಯಾಖ್ಯಾನ ಕಾರ ಕನ್ಸಲೈಂಟ್ ಇಂಟರ್ ಪ್ರಿಟರ್ ಹುದ್ದೆಗೆ ನೇಮಕಗೊಂಡಿದ್ದು ಹುಟ್ಟೂರಿಗೆ ಹೆಮ್ಮೆ ತರುವಂತದ್ದಾಗಿದೆ.

